ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಭೀಕರ ಕಾರು ಅಪಘಾತವಾಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಅವರು ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ ಇಳಿಯಲಿ ಎಂದು ಲಕ್ಷಾಂತರ ಅಭಿಮಾನಿಗಳು ಹಾರೈಸಿದ್ದರು.


ಇಷ್ಟು ಪ್ರತಿಕ್ರಿಯೆ ನೀಡದ ಸ್ಥಿತಿಯಲ್ಲಿದ್ದ ರಿಷಭ್ ಪಂತ್ ಇದೀಗ ಅಪಘಾತದ ಬಳಿಕ ಮೊದಲ ಬಾರಿ ಪೋಸ್ಟ್ ಮಾಡಿ ಎಲ್ಲರ ಪ್ರಾರ್ಥನೆಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ.
ನಾನು ವಿನಮ್ರ ಮತ್ತು ಎಲ್ಲಾ ಬೆಂಬಲ ಮತ್ತು ಶುಭ ಹಾರೈಕೆಗಳಿಗೆ ಕೃತಜ್ಞನಾಗಿದ್ದೇನೆ. ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ. ಚೇತರಿಕೆಯ ಹಾದಿ ಪ್ರಾರಂಭವಾಗಿದೆ ಮತ್ತು ಮುಂಬರುವ ಸವಾಲುಗಳಿಗೆ ನಾನು ಸಿದ್ಧನಿದ್ದೇನೆ. ಬಿಸಿಸಿಐಗೆ ಧನ್ಯವಾದಗಳು, ಜಯ್ ಶಾ ಮತ್ತು ಸರ್ಕಾರಿ ಅಧಿಕಾರಿಗಳು ಅವರ ನಂಬಲಾಗದ ಬೆಂಬಲಕ್ಕಾಗಿ ನನ್ನ ಹೃದಯಾಂತರಾಳದ ನಮನಗಳು. ನನ್ನ ಎಲ್ಲಾ ಅಭಿಮಾನಿಗಳ ಹಾರೈಕೆಯ ಮಾತುಗಳು ಮತ್ತು ಪ್ರೋತ್ಸಾಹಕ್ಕಾಗಿ, ತಂಡದ ಸಹ ಆಟಗಾರರು, ವೈದ್ಯರು ಮತ್ತು ಫಿಸಿಯೊಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮೆಲ್ಲರನ್ನೂ ಮೈದಾನದಲ್ಲಿ ನೋಡಲು ಎದುರು ನೋಡುತ್ತಿದ್ದೇನೆ. ಕೃತಜ್ಞತೆ, ಆಶೀರ್ವದಿಸಲ್ಪಟ್ಟಿದ್ದೇನೆ ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ರಿಷಭ್ ಪಂತ್ ಅವರಿಗೆ ಕನಿಷ್ಠ ಆರು ತಿಂಗಳು ವಿಶ್ರಾಂತಿಯ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

