ಪವನ್ ಒಡೆಯರ್ ‘ರೇಮೊ’ ರಿಲೀಸ್ ಗೆ ರೆಡಿಯಾಗಿದೆ. ಮ್ಯೂಸಿಕಲ್ ಪ್ರೇಮ ಕಥೆಯ ಪ್ರಚಾರದಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ. ಇದೇ ನವೆಂಬರ್ 25 ರಂದು ಚಿತ್ರ ತೆರೆಗೆ ಬರಲಿದೆ.
ಇಶಾನ್ – ಆಶಿಕಾ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೇವಂತ್ – ಮೋಹನಾ ಪಾತ್ರಗಳು ಇಲ್ಲಿವೆ. ಗಾಯಕರಾಗಿ ಇಬ್ಬರೂ ಕಾಣಿಸಿಕೊಂಡಿದ್ದಾರೆ.
ಚಿತ್ರದ ಪೋಸ್ಟರ್, ಟ್ರೇಲರ್ ನೋಡಿ ಕೆಲವರು ಇದನ್ನು ರಿಮೇಕ್ ಚಿತ್ರವೆಂದು ಹೇಳುತ್ತಿದ್ದಾರೆ. ಇದು ಹಿಂದಿಯ ʼಆಶಿಕಿ -2ʼ ಚಿತ್ರದ ರಿಮೇಕ್ ಎಂದಿದ್ದಾರೆ. ಆದರೆ ಇದಕ್ಕೆ ಸ್ವತಃ ನಿರ್ದೇಶಕ ಪವನ್ ಒಡೆಯರ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ʼರೇಮೊʼ ರಿಮೇಕ್ ಚಿತ್ರ ಎನ್ನುವವರು ಬಹುತೇಕ ಬೇಗನೇ ಜಡ್ಜ್ ಮಾಡುವ ಜನ. ಊಹೆ ಮಾಡುವುದು ಸರಿ ಆದರೆ ನೋಡದೇ ರಿಮೇಕ್ ಎನ್ನುವುದು ತಪ್ಪು. ರೇಮೊ ಯಾವುದೇ ರಿಮೇಕ್ ಚಿತ್ರವಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಪವನ್ ಒಡೆಯರ್ ಅವರು ʼ ಗೋವಿಂದಾಯ ನಮಃʼ, ʼಗೂಗ್ಲಿʼ ಸೇರಿದಂತೆ ಇದುವರೆಗೆ ಯಾವ ಸಿನಿಮಾವನ್ನು ರಿಮೇಕ್ ಮಾಡಿಲ್ಲ. ಮಾಡಿರುವುದೆಲ್ಲ ಸ್ವಮೇಕ್ ಚಿತ್ರಗಳೇ.

