ಏಷ್ಯಾ ಕಪ್ ನಲ್ಲಿ ಪಾಕ್ ಹಾಗೂ ಹಾಂಕಾಂಗ್ ವಿರುದ್ದ ಗೆದ್ದು ಬೀಗಿ ಸೂಪರ್ 4 ಹಂತಕ್ಕೆ ತಲುಪಿರುವ ಟೀಮ್ ಇಂಡಿಯಾಕ್ಕೆ ದೊಡ್ಡ ಹೊಡೆತವೊಂದು ಬಿದ್ದಿದೆ. ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್ ನ ಉಳಿದ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ.
ಜಡೇಜಾ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ಅವರನ್ನು ಇದು ಹೆಚ್ಚು ಕಾಡುತ್ತಿದೆ. ಹಾಗಾಗಿ ಅಖಿಲ ಭಾರತ ಕ್ರಿಕೆಟ್ ಆಯ್ಕೆ ಸಮಿತಿಯು ಏಷ್ಯಾಕಪ್ ನ ಉಳಿದ ಪಂದ್ಯಕ್ಕೆ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಟಿ-20 ವಿಶ್ವಕಪ್ ಮುಂದಿನ ತಿಂಗಳಿನಿಂದ ನಡೆಯಲಿದ್ದು, ಈ ಸಮಯದಲ್ಲಿ ಜಡೇಜಾ ಅವರು ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಅವರು ವಿಶ್ವಕಪ್ ತಂಡಕ್ಕೆ ಆಯ್ಕೆಗೊಳ್ಳುತ್ತಾರೋ, ಇಲ್ವೋ ಅನ್ನೋದು ಅನುಮಾನ.
ಇನ್ನು ಜಡೇಜಾ ಪಾಕಿಸ್ತಾನ ಹಾಗೂ ಹಾಂಕಾಂಗ್ ವಿರುದ್ದ ಜಡ್ಡು ಆಲ್ ರೌಂಡ್ ಆಟವನ್ನಾಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.

