ಕ್ರೇಜಿಸ್ಟಾರ್ ರವಿಚಂದ್ರನ್ ಬ್ಯಾಕ್ ಟು ಬ್ಯಾಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
‘ಕ್ರೇಜಿಸ್ಟಾರ್’, ‘ಕನ್ನಡಿಗ’ ಸಿನಿಮಾವನ್ನು ನಿರ್ಮಾಣ ಮಾಡಿರುವ ಎನ್.ಎಸ್.ರಾಜ್ ಕುಮಾರ್ ಮತ್ತೊಮ್ಮೆ ರವಿಚಂದ್ರನ್ ಅವರ ಸಿನಿಮಾಕ್ಕೆ ಬಂಡವಾಳ ಹಾಕಲು ರೆಡಿಯಾಗಿದ್ದಾರೆ.
ಮೂರನೇ ಬಾರಿ ನಿರ್ಮಾಣ ಮಾಡಲಿರುವ ಚಿತ್ರದ ಟೈಟಲ್ ಇನ್ನು ಫೈನಲ್ ಆಗಬೇಕಿದ್ದು, ಕಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ಹಾಗೂ ಜಾಹೀರಾತುಗಳಲ್ಲಿ ಕೆಲಸ ಮಾಡಿರುವ ಅನೀಶ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಿನಿಮಾದ ಮ್ಯೂಸಿಕನ್ನು ಕಾರ್ತಿಕೇಯನ್ ಮಾಡಲಿದ್ದು, ಸತೀಶ್ ಅವರು ಛಾಯಾಗ್ರಹಣ ಮಾಡಲಿದ್ದಾರೆ. ಇದೊಂದು ಫ್ಯಾಮಿಲಿ ಎಂಟೇಟೈನರ್ ಸಿನಿಮಾವಾಗಲಿದೆ ಎಂದು ತಿಳಿದು ಬಂದಿದೆ.
ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ರವಿಚಂದ್ರನ್ ‘ವಿಜಯಾನಂದ’ ಹಾಗೂ ‘ಕ್ರಾಂತಿ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

