ಅಲ್ಲು ಅರ್ಜುನ್ ಅವರ ಬಿಗೆಸ್ಟ್ ಬ್ಲಾಕ್ ಬಸ್ಟರ್ ‘ಪುಷ್ಪ’ ದಕ್ಷಿಣ ಭಾರತದಲ್ಲಿ ದೊಡ್ಡ ಸದ್ದು ಮಾಡಿದ ಸಿನಿಮಾಗಳಲ್ಲೊಂದು.
ಭರಪೂರ ಆ್ಯಕ್ಷನ್ ಸೀನ್ ಗಳಿಂದ ಮಾಸ್ ಪ್ರಿಯರನ್ನು ರಂಜಿಸಿ, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಕೂಡ ಮಾಡಿತ್ತು.


ಚಿತ್ರದ ಪಾರ್ಟ್ – 2 ಬಗ್ಗೆ ಟಿಟೌನ್ ನಲ್ಲಿ ನಿರೀಕ್ಷೆ ಹೆಚ್ಚಿದೆ. ಅಲ್ಲು ಅರ್ಜುನ್ ಇತ್ತೀಚೆಗೆ ಫೋಟೋವೊಂದನ್ನು ಹಚ್ಚಿಕೊಂಡಿದ್ದರು. ಅದು ‘ಪುಷ್ಪ-2’ ಗಾಗಿಯೇ ತೆಗೆಸಿಕೊಂಡ ಫೋಟೋ ಎಂಬುದು ಸುದ್ದಿಯಾಗಿತ್ತು.
ಕೆಲ ದಿನಗಳ ಹಿಂದೆ ಅಲ್ಲು ಅರ್ಜುನ್ ಚಿತ್ರಕ್ಕಾಗಿ ದೊಡ್ಡ ಮಟ್ಟದ ಸಂಭಾವನೆ ಕೇಳಿದ್ದಾರೆ ಎನ್ನುವ ಸುದ್ದಿಯಾಗಿತ್ತು. 125 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿತ್ತು. ಈಗ ಚಿತ್ರದ ನಾಯಕಿ ‘ಶ್ರೀವಲ್ಲಿ’ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರು ಕೂಡ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ಅವರ ಸಂಭಾವನೆ ಕೇಳಿ ಚಿತ್ರ ತಂಡ ಬೆಚ್ಚಿ ಬಿದ್ದಿದೆಯಂತೆ.
ಪುಷ್ಪ ಚಿತ್ರಕ್ಕಾಗಿ ಅವರು 1 ಕೋಟಿ ಸಂಭಾವನೆ ಪಡೆದುಕೊಂಡಿದ್ದರು. ಈಗ ಅದನ್ನು ಹೆಚ್ಚಿಸಿದ್ದು 5 ಕೋಟಿಯನ್ನು ಕೇಳಿದ್ದಾರೆ ಎನ್ನಲಾಗಿದೆ.
ಸದ್ಯ ಈ ಸುದ್ದಿ ಸದ್ದು ಮಾಡುತ್ತಿದೆ. ಅಂದ ಹಾಗೆ ಪುಷ್ಪ – 2 ಪ್ಯಾನ್ ಇಂಡಿಯಾ ಸಿನಿಮಾ. ಮುಂದಿನ ವರ್ಷ ಚಿತ್ರ ತೆರೆಗೆ ಬರಲಿದೆ ಎನ್ನಲಾಗಿದೆ.



