‘ಕಿರಿಕ್ ಪಾರ್ಟಿ’ ಬೆಡಗಿ ಸದ್ಯದ ಬಹುಭಾಷಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವವರು. ಎಲ್ಲಾ ಭಾಷೆಯ ಚಿತ್ರರಂಗಗಳ ಸ್ಟಾರ್ ನಟರ ಜೊತೆಗೂ ಸಿನಿಮಾ ಮಾಡುತ್ತಿರುವ ಖ್ಯಾತಿ ಇವರದ್ದು. ಇಡೀ ದೇಶದಾದ್ಯಂತ ಪ್ರಸಿದ್ಧರಾಗಿರುವ ರಶ್ಮಿಕಾ ಇದೀಗ ತಮ್ಮ ವೃತ್ತಿಜೀವನದಲ್ಲಿ ಹೊಸದೊಂದು ಹೆಜ್ಜೆ ಇಡುತ್ತಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಗುರುತಿಸಿಕೊಂಡಿದ್ದ ರಶ್ಮಿಕಾ, ಮಹಿಳಾ ಪ್ರಧಾನ ಸಿನಿಮಾವೊಂದರಲ್ಲಿ ನಟಿಸಲು ಸಿದ್ದವಾಗಿದ್ದಾರೆ. ಸಿನಿಮಾದ ಮುಹೂರ್ತ ನೆರವೇರಿದ್ದು ಈ ಬಗ್ಗೆ ರಶ್ಮಿಕಾ ತಮ್ಮ ಟ್ವಿಟರ್ ನ ಮೂಲಕ ಹಂಚಿಕೊಂಡಿದ್ದಾರೆ.
ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಹೊಸ ಚಿತ್ರಕ್ಕೆ ‘ರೈನ್ಬೋ(RAINBOW)’ ಎಂದು ಹೆಸರಿಡಲಾಗಿದೆ. ಹೊಸ ನಿರ್ದೇಶಕ ಶಾಂತರುಬನ್ ಈ ಚಿತ್ರದ ನಿರ್ದೇಶಕರು. ಕನ್ನಡ, ತಮಿಳು, ತೆಲುಗು ಸೇರಿದಂತೆ ಪಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ತಯಾರಾಗಲಿದೆ. ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಅವರನ್ನು ಈ ಹೊಸ ಚಿತ್ರದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.



