ಕೊಡಗಿನ ಸುಂದರಿ, ‘ಕಿರಿಕ್ ಪಾರ್ಟಿ’ ಬೆಡಗಿ ರಶ್ಮಿಕಾ ಮಂದಣ್ಣ ಬಹು ಬೇಡಿಕೆಯ ಬ್ಯುಸಿ ನಟಿಯರಲ್ಲಿ ಒಬ್ಬರು. ಸದಾ ಒಂದಲ್ಲ ಒಂದು ವಿಚಾರಕ್ಕೆ ರಶ್ಮಿಕಾ ಸುದ್ದಿಯಲ್ಲಿರುತ್ತಾರೆ.
ಅನೇಕ ಮಂದಿ ರಶ್ಮಿಕಾ ಅವರನ್ನು ಟ್ರೋಲ್ ಮಾಡುತ್ತಾರೆ. ಆದರೆ ರಶ್ಮಿಕಾ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಯಶಸ್ಸಿನ ಉತ್ತುಂಗದಲ್ಲಿ ನಡೆಯುತ್ತಿದ್ದಾರೆ.
ಸದ್ಯ ‘ವಾರಿಸು’ ಹಾಗೂ ಹಿಂದಿಯ ‘ಮಿಷನ್ ಮಜ್ನು’ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ರಶ್ಮಿಕಾ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯೊಂದಿಗೆ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮವೊಂದರಲ್ಲಿ ನಟಿ ರಶ್ಮಿಕಾ ಅಭಿಮಾನಿಯೊಬ್ಬರ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಪಕ್ಕದಲ್ಲಿದ್ದ ಮತ್ತೋರ್ವ ಅಭಿಮಾನಿ ಯಾವುದಾದರೂ ಹುಡುಗಿಗೆ ತೆಲುಗಿನಲ್ಲಿ ಪ್ರಮೋಸ್ ಮಾಡಬೇಕಾದರೆ ಏನು ಹೇಳಬೇಕು ಎಂದಿದ್ದಾನೆ.
ಇದಕ್ಕೆ ರಶ್ಮಿಕಾ ಯಾರಾದರೂ ಇದ್ದಾರ ಎಂದಿದ್ದಾರೆ. ಹೇಳಿ ಏನು ಹೇಳಬೇಕು ಹೇಳಿ ಎಂದಾಗ ರಶ್ಮಿಕಾ ತೆಲುಗಿನಲ್ಲಿ ‘ನೀವು ಚೆನ್ನಾಗಿ ಕಾಣುತ್ತಿದ್ದೀರಿ. ಐ ಲವ್ ಯೂ ಎಂದು ಹೇಳಬೇಕು’ ಎಂದು ಟಿಪ್ಸ್ ಕೊಟ್ಟಿದ್ದಾರೆ.
ಸದ್ಯ ರಶ್ಮಿಕಾ ಅವರ ಮಾತಿನ ಕ್ಯೂಟ್ ವಿಡಿಯೋ ಸಖತ್ ವೈರಲ್ ಆಗಿದೆ.

