ಕೊಡಗಿನ ಬೆಡಗಿ ‘ಕಿರಿಕ್ ಪಾರ್ಟಿ’ ಯ ಸಾನ್ವಿ ನಟಿ ರಶ್ಮಿಕಾ ಮಂದಣ್ಣ ಸದಾ ಚರ್ಚೆಯಲ್ಲಿರುತ್ತಾರೆ. ಸಿನಿಮಾದಲ್ಲಿನ ಅವರ ಅಭಿನಯಕ್ಕಿಂತ ಅವರ ಮಾತುಗಳೇ ಅವರ ವಿರುದ್ಧ ಟ್ರೋಲರ್ ಗಳು ತಿರುಗಿ ಬೀಳುವಂತೆ ಮಾಡುತ್ತದೆ.
ಸದಾ ಒಂದಲ್ಲ ಒಂದು ಕಾರಣದಿಂದ ಟ್ರೆಂಡ್ ಆಗುವ ರಶ್ಮಿಕಾ ಈಗ ಮತ್ತೆ ಟ್ರೋಲ್ ಆಗಿದ್ದಾರೆ.
ಇತ್ತೀಚೆಗೆ ನಟ ಕಿಚ್ಚ ಸುದೀಪ್ ಸಾರ್ವಜನಿಕ ಜೀವನಕ್ಕೆ ಬಂದರೆ ಹೂಮಾಲೆ, ಮೊಟ್ಟೆ, ಟೊಮೆಟೋ ಮತ್ತು ಕಲ್ಲು ಯಾವಾಗಲು ನಿಮ್ಮ ಬಳಿಗೆ ಬರುತ್ತದೆ, ಹ್ಯಾಂಡಲ್ ಮಾಡುವುದನ್ನು ಕಲಿಯಬೇಕು’ ಎಂದು ಹೇಳಿದ್ದರು.
ಈ ಮಾತು ರಶ್ಮಿಕಾ ಅವರಿಗೆ ಹೇಳಿದಂತಿತ್ತು. ಇದಕ್ಕೆ ನಟಿ ರಶ್ಮಿಕಾ ಅವರು ಪ್ರತಿಕ್ರಿಯಿಸಿ ಟಾಂಗ್ ಕೊಟ್ಟಿದ್ದಾರೆ.
ನಾನು ಈ ಮಾತನ್ನು ಒಪ್ಪುತ್ತೇನೆ. ಏಕೆಂದರೆ ನಾವು ಸಾರ್ವಜನಿಕ ವ್ಯಕ್ತಿಗಳು. ಆದರೆ ಕಲ್ಲು ಎಸೆದು ನೋವಾದಾಗ, ರಕ್ತ ಬಂದಾಗಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣನವರ ಬಾಲಿವುಡ್ ಸಿನಿಮಾ ‘ಮಿಷನ್ ಮಜ್ನು’ ಓಟಿಟಿಯಲ್ಲಿ ರಿಲೀಸ್ ಆಗಿದ್ದು, ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

