ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಸಿನಿಮಾದಿಂದ ಬ್ಯಾನ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಕೆಲವರು ರಶ್ಮಿಕಾ ಅವರ ವರ್ತನೆ ನೋಡಿ ಅವರ ವಿರುದ್ದ ಆಕ್ರೋಶ ಹೊರ ಹಾಕಿದ್ದರು.
ಮಾಧ್ಯಮದವರೊಂದಿಗೆ ನಟಿ ರಶ್ಮಿಕಾ ಮಾತಾನಾಡಿ ಈ ಬಗ್ಗೆ ಸ್ಷಷ್ಟನೆ ನೀಡಿದ್ದಾರೆ.
‘ಕಾಂತಾರ’ ಸಿನಿಮಾ ರಿಲೀಸ್ ಆದ ಎರಡು ದಿನಗಳಲ್ಲಿ ಆ ಸಿನಿಮಾವನ್ನು ನಾನು ನೋಡಿರಲಿಲ್ಲ. ಈಗ ಸಿನಿಮಾವನ್ನು ನೋಡಿದ್ದೇನೆ. ಸಿನಿಮಾವನ್ನು ನೋಡಿ ಚಿತ್ರ ತಂಡಕ್ಕೆ ಮೆಸೇಜ್ ಮಾಡಿದ್ದೇನೆ. ಚಿತ್ರ ತಂಡ ಥ್ಯಾಂಕ್ಯೂ ಎಂದು ಪ್ರತಿಕ್ರಿಯೆಯೂ ಬಂದಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ ಬಗ್ಗೆ ನನಗೆ ಪ್ರೀತಿ ಇದ್ದೇ ಇರುತ್ತದೆ. ವಾಸ್ತವ ಗೊತ್ತಿಲ್ಲದೇ ಏನೇನನ್ನೋ ಹಬ್ಬಿಸುತ್ತಿದ್ದಾರೆ.
ನನ್ನ ವೈಯಕ್ತಿಕ ವಿಚಾರಗಳನ್ನು ಕ್ಯಾಮೆರಾ ಮುಂದೆ ಇಟ್ಟು ಪ್ರಪಂಚಕ್ಕೆ ತೋರಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ನನ್ನ ವೈಯಕ್ತಿಕ ವಿಚಾರಗಳು ಪ್ರಪಂಚಕ್ಕೆ ಬೇಕಾಗಿಲ್ಲ. ವೃತ್ತಿಪರವಾಗಿ ನನ್ನ ಸಿನಿಮಾಗಳ ಬಗ್ಗೆ ಮಾತನಾಡುವುದು ನನ್ನ ಜವಾಬ್ದಾರಿ. ಬ್ಯಾನ್ ಬಗ್ಗೆ ನನಗೇನು ಮಾಹಿತಿ ಇಲ್ಲ ಎಂದಿದ್ದಾರೆ.

