ಪವರ್ ಸ್ಟಾರ್ ಅಪ್ಪು ಅವರನ್ನು ನೆನೆಪು ಮಾಡಿಕೊಳ್ಳದ ದಿನಗಳೇ ಇಲ್ಲ. ಅಭಿಮಾನಿಗಳಿಂದ ಹಿಡಿದು ಸೆಲೆಬ್ರಿಟಿಗಳೂ ಆಗಾಗ ಅಪ್ಪು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ.
ನಿರ್ದೇಶಕ ಎ.ಹರ್ಷ ಅವರು ಆ್ಯಕ್ಷನ್ ಕಟ್ ಹೇಳಿದ್ದ ‘ಅಂಜನಿ ಪುತ್ರ’ ರಿಲೀಸ್ ಆಗಿ 5 ವರ್ಷಗಳು ಕಳೆದಿದೆ. ‘ಚೆಂದ ಚೆಂದ’ ಎಂದು ಅಪ್ಪು – ರಶ್ಮಿಕಾ ಅವರು ಒಟ್ಟಾಗಿ ಹೆಜ್ಜೆ ಹಾಕಿದ್ದು ಇನ್ನು ಹಾಗೆಯೇ ನೆನಪಾಗಿ ಉಳಿದಿದೆ. ಸಿನಿಮಾ ಒಂದಷ್ಟು ದಿನ ಸದ್ದು ಮಾಡಿತ್ತು.
ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣ ಅವರು 5 ವರ್ಷ ಆದ ಸಮಯದಲ್ಲಿ ಅಪ್ಪು ಅವರನ್ನು ನೆನೆದು ಟ್ವೀಟ್ ಮಾಡಿದ್ದಾರೆ.
ಅಂಜನಿಪುತ್ರ ಚಿತ್ರಕ್ಕೆ 5 ವರ್ಷಗಳಾಯಿತು. ನಾನು ಪುನೀತ್ ರಾಜ್‌ಕುಮಾರ್ ಸರ್ ಜೊತೆ ನಡೆಸಿದ ಸಂಭಾಷಣೆ ಬಗ್ಗೆ ಸದಾ ಚಿಂತಿಸುತ್ತಿರುತ್ತೇನೆ. ಅಪ್ಪು ಸರ್ ನನಗಿಂತ ಹೆಚ್ಚು ನನ್ನ ಮೇಲೆ ವಿಶ್ವಾಸ ಹೊಂದಿದ್ದರು. ಒಳ್ಳೆಯ ಹೃದಯ ಇದ್ದ ವ್ಯಕ್ತಿ. ನನ್ನ ಹೃದಯದಲ್ಲಿ ಅವರು ಸದಾ ಇರುತ್ತಾರೆ. ಇಂತಹ ಅವಕಾಶ ಕೊಟ್ಟಿದ್ದಕ್ಕೆ ಹರ್ಷ ಸರ್‌ಗೆ ಧನ್ಯವಾದ’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.
ಡಿ.21, 2017 ರಂದು ‘ಅಂಜನಿ ಪುತ್ರ’ ತೆರೆಗೆ ಬಂದಿತ್ತು.



