

ಬಾಲಿವುಡ್ ನಟ ರಣ್ ವೀರ್ ಸಿಂಗ್ ಸದ್ಯ ʼಹಾಟ್ʼ ಟಾಪಿಕ್, ಇತ್ತೀಚೆಗೆ ಅವರ ಬೆತ್ತಲೆ ಫೋಟೋ ಇಂಟರ್ ನೆಟ್ ನಲ್ಲಿ ಭಾರೀ ಸದ್ದು ಮಾಡಿ, ಚರ್ಚಾ ವಿಷಯಕ್ಕೆ ಕಾರಣವಾಗಿತ್ತು.
ರಣ್ ವೀರ್ ಸಿಂಗ್ ಸದಾ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರ ಸಿನಿಮಾ ಕೆರಿಯರ್ ನಲ್ಲೂ ಅವರು ಭಿನ್ನವಾದ ಪಾತ್ರಗಳನ್ನು ಮಾಡಲು ಇಚ್ಛಿಸುವ ನಟ.
ಈ ಹಿಂದೆ ಕೂಡ ರಣ್ ವೀರ್ ಸಿಂಗ್ ಅವರು ಹಾಕಿಕೊಂಡ ವಿಚಿತ್ರ ಬಟ್ಟೆಯ ಬಗ್ಗೆ ಬಿಟೌನ್ ನಲ್ಲಿ ಮಾತುಗಳು ಎಬ್ಬಿದ್ದವು. ಇದೀಗ ಅವರು ಮ್ಯಾಗ್ ಜಿನ್ ವೊಂದಕ್ಕೆ ಮಾಡಿಸಿದ ಫೋಟೋ ಶೂಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.


ಮೈಯಲ್ಲಿ ತುಂಡು ಬಟ್ಟೆಯೂ ಇಲ್ಲದೆ ಮಲಗಿ,ಕೂತು ಪೋಸ್ ನೀಡಿದ ಅವರ ಫೋಟೋಗೆ,ಅವರ ಬೋಲ್ಡ್ ಸ್ಟೆಪ್ ಗೆ ಹಲವಾರು ಸ್ಟಾರ್ ಗಳು ಮೆಚ್ಚುಗೆ ಸೂಚಿಸಿದ್ದರು. ಇನ್ನು ಕೆಲವರು ರಣ್ ವೀರ್ ಅವರ ಈ ಲುಕ್ ನೋಡಿ ಆಶ್ಚರ್ಯಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅವರನ್ನು ಟ್ರೋಲ್ ಮಾಡಿ, ಅಸಭ್ಯ ಕಮೆಂಟ್ ಗಳನ್ನು ಕೂಡ ಮಾಡಿದ್ದಾರೆ.
ಆದರೆ ಇದ್ಯಾವುದಕ್ಕೂ ರಿಯಾಕ್ಟ್ ಮಾಡದ ರಣ್ ವೀರ್ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅದಕ್ಕೆ ಕಾರಣ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಮುಂಬೈನ
ರಣವೀರ್ ಸಿಂಗ್ ಅವರ ಬೆತ್ತಲೆ ಫೋಟೋಶೂಟ್ ವಿರುದ್ಧ ಪ್ರಕರಣ ದಾಖಲು ಮಾಡಿದೆ. ಈ ಎನ್ ಜಿಒ ಸಂಸ್ಥೆಯವರು , ಈ ರೀತಿ ಫೋಟೋ ಶೂಟ್ ಮಾಡಿಸಿದ್ದರಿಂದ ಮಹಿಳೆಯರ ಭಾವನೆಗೆ ಧಕ್ಕೆ ಆಗಿದೆ. ‘ನಾವು ವಾಕ್ ಸ್ವಾತಂತ್ರ್ಯ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಆದರೆ, ಬೆತ್ತಲೆ ಫೋಟೋಗಳನ್ನು ಹಾಕುವುದನ್ನು ನಾವು ಖಂಡಿಸುತ್ತೇವೆ. ಹೀರೋಗಳನ್ನು ಸಾಕಷ್ಟು ಜನ ಹಿಂಬಾಲಿಸುತ್ತಾರೆ. ಆದರೆ ಈ ರೀತಿಯ ಫೋಟೋದಿಂದ ಸಮಾಜ ತಲೆ ತಗ್ಗಿಸುವಂತಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಹೇಳಲಾಗಿದೆ.



