ಮೋಹಕ ತಾರೆ ರಮ್ಯಾ ಕೊನೆಗೂ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಲಕ್ಷಾಂತರ ಅಭಿಮಾನಿಗಳು ರಮ್ಯಾ ಮತ್ತೆ ಬಣ್ಣದ ಲೋಕದಲ್ಲಿ ಮೋಹಕ ತಾರೆ ರಮ್ಯಾ ಕೊನೆಗೂ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಬಯಸಿದ್ದರು.ಮೋಹಕ ತಾರೆ ರಮ್ಯಾ ಕೊನೆಗೂ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಲಕ್ಷಾಂತರ ಅಭಿಮಾನಿಗಳು ರಮ್ಯಾ ಮತ್ತೆ ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳಬೇಕೆಂದು ಬಯಸಿದ್ದರು.
ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಮೂಲಕ ನಿರ್ಮಾಪಕರಾಗಲು ಹೊರಟಿರುವ ರಮ್ಯಾ ಇತ್ತೀಚಿಗೆ ತಮ್ಮ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಆಗುತ್ತಿರುವ ಮೊದಲ ಚಿತ್ರದ ಟೈಟಲ್ ಪೋಸ್ಟರ್ ನ್ನು ರಿಲೀಸ್ ಮಾಡಿದ್ದಾರೆ.
ರಾಜ್ ಬಿ.ಶೆಟ್ಟಿ ಅವರೊಂದಿಗೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವನ್ನು ಅವರು ಮಾಡಲಿದ್ದು, ಇದರಲ್ಲಿ ರಮ್ಯಾ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವೆಂದು ಇತ್ತೀಚೆಗೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.
ಖಾಸಗಿ ಟಿವಿ ವಾಹಿನಿಯ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಮ್ಯಾ ಅವರಿಗೆ ನಿರೂಪಕ ಅಕುಲ್ ಪ್ರೀತಿಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಮ್ಯಾ ಅವರು ಮುಗುಳ ನಗುತ್ತಲೇ ಉತ್ತರಿಸಿದ್ದಾರೆ.
ನಾನು ಸಿಂಗಲ್ ಆಗಿದ್ದೇನೆ, ಆತ ಕೂಡ ಸಿಂಗಲ್ ಆಗಿರಬೇಕು, ಆತನಿಗೆ ಮದುವೆ ಆಗಿರಬಾರದು. ಹುಡುಗನ ಲುಕ್ಸ್ ಬಗ್ಗೆ ನಾನು ಹೆಚ್ಚು ಯೋಚನೆ ಮಾಡುವುದಿಲ್ಲ. ಅವರು ಒಳ್ಳೆಯ ಮನುಷ್ಯರಾಗಿರಬೇಕು. ಅವರಲ್ಲಿ ಕರುಣೆಯ ಗುಣ ಹೆಚ್ಚಿಗೆ ಇರಬೇಕು” ಎಂದು ಹೇಳಿದ್ದಾರೆ.

