ಮೋಹಕ ತಾರೆ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನ ಮೊದಲ ಸಿನಿಮಾದ ಟೈಟಲ್ ಅನೌನ್ಸ್ ಗೆ ದಿನಗಣನೆ ಆರಂಭವಾಗಿದೆ.
ಎರಡು ಚಿತ್ರಗಳನ್ನು ನಿರ್ಮಾಣ ಮಾಡಲಿದ್ದೇವೆ ಎಂದಿರುವ ರಮ್ಯಾ ಪ್ರೊಡಕ್ಷನ್ ಮೊದಲ ಚಿತ್ರದ ಟೈಟಲ್ ಅನೌನ್ಸ್ ಮೆಂಟ್ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಗಣೇಶ ಹಬ್ಬದಂದು ತನ್ನ ಪ್ರೊಡಕ್ಷನ್ ಸಂಸ್ಥೆಯನ್ನು ಘೋಷಿಸಿದ ರಮ್ಯಾ ಈಗ ವಿಜಯದಶಮಿ ದಿನ ತಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾಗುತ್ತಿರುವ ಸಿನಿಮಾದ ಟೈಟಲ್ ರಿವೀಲ್ ಮಾಡಲಿದ್ದಾರೆ.
ಆದರೆ ನಿರ್ದೇಶನ ಯಾರು, ಯಾವ, ಕಥೆ, ಪಾತ್ರಗಳು ಈ ಬಗ್ಗೆ ಇನ್ನು ಯಾವ ಮಾಹಿತಿಯೂ ಹೊರ ಬಿದ್ದಿಲ್ಲ. ಕೆಲವರು ರಾಜ್.ಬಿ.ಶೆಟ್ಟಿ ಅವರೊಂದಿಗೆ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ.
ರಮ್ಯಾ ಅವರು ಏನಾದರೂ ಸಿನಿಮಾದಲ್ಲಿ ನಟಿಸಬಹುದೇ? ಎನ್ನುವುದು ಫ್ಯಾನ್ಸ್ ಕುತೂಹಲದ ಪ್ರಶ್ನೆಯಾಗಿದೆ. ಈ ಎಲ್ಲದಕ್ಕೂ ಅ.5 ರಂದು ಬೆಳಗ್ಗೆ 10:30 ಕ್ಕೆ ತೆರೆ ಬೀಳಲಿದೆ.

