HomeExclusive Newsಸ್ಯಾಂಡಲ್‌ ವುಡ್‌ ಕ್ವೀನ್‌ ಚಿತ್ರರಂಗಕ್ಕೆ ಕಂಬ್ಯಾಕ್‌ ಏನಿದೆ? ಅವರ ಪೋಸ್ಟ್‌ ನಲ್ಲಿ

ಸ್ಯಾಂಡಲ್‌ ವುಡ್‌ ಕ್ವೀನ್‌ ಚಿತ್ರರಂಗಕ್ಕೆ ಕಂಬ್ಯಾಕ್‌ ಏನಿದೆ? ಅವರ ಪೋಸ್ಟ್‌ ನಲ್ಲಿ

ಮೋಹಕ ತಾರೆ ರಮ್ಯಾ ಅವರ ಸಾವಿರಾರು ಅಭಿಮಾನಿಗಳು ಕಾತರದಿಂದ ಕಾತರದಿಂದ ಕಾಯುತ್ತಿದ್ದ ದಿನ ಅಂತೂ ಬಂದಿದೆ.
ಸ್ಯಾಂಡಲ್‌ ವುಡ್‌ ಕ್ವೀನ್‌ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಹೊಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಬಹು ಸಮಯದಿಂದ ಬಣ್ಣದ ಲೋಕದಿಂದ ದೂರ ಉಳಿದಿದ್ದ ರಮ್ಯಾ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.


ಈ ಬಗ್ಗೆ ಪೋಸ್ಟ್‌ ಹಾಕಿರುವ ಅವರು, ಪೋಸ್ಟ್‌ ನಲ್ಲಿ, ಇಂದು ಮೋಹಕ ತಾರೆ, ಆ ಸುದ್ದಿಯನ್ನು ರಿವೀಲ್‌ ಮಾಡಿದ್ದಾರೆ. ಗಣೇಶ ಹಬ್ಬದ ಶುಭಾಶಯವನ್ನು ಕೇಳಿ, ನಾನು ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಿದ್ದೇನೆ. ಆದರೆ ಈ ಬಾರಿ ನನ್ನ ನಿರ್ಮಾಣ ಸಂಸ್ಥೆ, ಆ್ಯಪಲ್‌ ಬಾಕ್ಸ್‌ ಮೂಲಕ ನಿರ್ಮಾಪಕಿಯಾಗಲಿದ್ದೇನೆ ಎನ್ನುವುದು ವಿಶೇಷ.


ಏನಿದು ಆ್ಯಪಲ್‌ ಬಾಕ್ಸ್‌ ಅದೊಂದು ಸಾಧಾರಣವಾದ ಅಷ್ಟೇ ಉಪಯುಕ್ತವಾದ ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆ್ಯಪಲ್‌ ಬಾಕ್ಸ್‌ ಜೊತೆಗಿದೆ. ಸೆಟ್‌ ನಲ್ಲಿ ಕುರ್ಚಿಗಳಿಲ್ಲದೇ ಇದ್ದಾಗ ಅಥವಾ ಕ್ಯಾಮರಾ, ಇಲ್ಲವೇ ನಟರ ಎತ್ತರ ಹೆಚ್ಚಿಸಬೇಕದಾಗ ಈ ಆ್ಯಪಲ್‌ ಬಾಕ್ಸ್‌ ನೆರವಿಗೆ ಬಂದಿದೆ. ಈ ಪೆಟ್ಟಿಗೆಯ ಸರಳತೆ ನನಗೆ ಸ್ಪೂರ್ತಿಯಾಗಿ ಪ್ರೇರೇಪಿಸಿದೆ.


ಪ್ರಸುತ್ತ ಆ್ಯಪಲ್‌ ಬಾಕ್ಸ್‌ ಎರಡು ಚಿತ್ರಗಳನ್ನು ನಿರ್ಮಿಸಲು ಸಜ್ಜಾಗಿದೆ ಎಂದು ಹೇಳುವಲ್ಲಿ ನನಗೆ ಸಂತಸವಿದೆ. ಈ ಎರಡೂ ಚಿತ್ರಗಳು ಕೆ.ಆರ್.ಜಿ. ಸಂಸ್ಥೆಯ ವಿತರಣೆಯ ಮೂಲಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಅದರ ಜೊತೆಯಲ್ಲೇ ಓಟಿಟಿ ಫ್ಲ್ಯಾಟ್‌ ಫಾರಂಗಳಿಗಾಗಿ ಸಿನಿಮಾ ಹಾಗೂ ವೆಬ್‌ ಸಿರೀಸ್‌ ನಿರ್ಮಾಣ ಮಾಡಲು ಆ್ಯಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಸಿದ್ದವಾಗುತ್ತಿದೆ.


ಈ ಬಗ್ಗೆ ಮತ್ತಷ್ಟು ವಿವರಗಳನ್ನು ಆ್ಯಪಲ್‌ ಬಾಕ್ಸ್‌ ನ ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷಿಸಿ.
ನನ್ನೆಲ್ಲಾ ಪ್ರಯತ್ನಗಳಲ್ಲೂ ನಿರಂತರವಾಗಿ ಜೊತೆಗಿರುವ ನನ್ನ ಕುಟುಂಬ, ಸ್ನೇಹಿತರು ಹಿತೈಷಿಗಳು, ಸಿನಿಮಾವರ್ಗದವರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಪ್ರೀತಿಯ ಅಭಿಮಾನಿಗಳಿಗೆ ಹೃತ್ಪೂರ್ವಕ ವಂದನೆಗಳು. ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಬೆಲೆ ಕಟ್ಟಲಾಗದ್ದು.


ಇದೇ ವೇಳೆ ವಿಜಯ್‌ ಕಿರಂಗಂದೂರ್‌,ಜಯಣ್ಣ, ಯೋಗಿ ಜಿ ರಾಜ್‌ ಮತ್ತು ಕಾರ್ತಿಕ್‌ ಗೌಡ ಇವರಿಗೂ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

RELATED ARTICLES

Most Popular

Share via
Copy link
Powered by Social Snap