HomeNews'ಆಪ್ತಮಿತ್ರ' ರಿಲೀಸ್ ಆಗಿ 18 ವರ್ಷ ಪೂರ್ತಿ: ಫೋಟೋ ಹಂಚಿಕೊಂಡು ವಿಷ್ಣುದಾದ ನೆನೆದ ರಮೇಶ್ ಅರವಿಂದ್

‘ಆಪ್ತಮಿತ್ರ’ ರಿಲೀಸ್ ಆಗಿ 18 ವರ್ಷ ಪೂರ್ತಿ: ಫೋಟೋ ಹಂಚಿಕೊಂಡು ವಿಷ್ಣುದಾದ ನೆನೆದ ರಮೇಶ್ ಅರವಿಂದ್

2004 ರಲ್ಲಿ ಮಲಯಾಳಂನ ‘ಮಣಿಚಿತ್ರತ್ತಾಳ್’ ಚಿತ್ರವನ್ನು ಕನ್ನಡದಲ್ಲಿ ‘ಆಪ್ತಮಿತ್ರ’ ಎಂದು ರಿಮೇಕ್ ಮಾಡಿದ್ದ ಪಿ.ವಾಸು ಪ್ರೇಕ್ಷಕರನ್ನು ಸೆಳೆದಿದ್ದರು. ಈ ಚಿತ್ರ ಬಿಡುಗಡೆಯಾಗಿ 18 ವರ್ಷಗಳು ಕಳೆದಿದೆ.


ಸಾಹಸ ಸಿಂಹ ವಿಷ್ಣುವರ್ಧನ್ ಅವರ ವೃತ್ತಿ ಬದುಕಿನಲ್ಲಿ ದೊಡ್ಡ ಹಿಟ್ ತಂದುಕೊಟ್ಟ ಚಿತ್ರಗಳಲ್ಲಿ ‘ಆಪ್ತಮಿತ್ರ’ ಚಿತ್ರವೂ ಒಂದು. ಡಾ. ವಿಜಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಷ್ಣುವರ್ಧನ್ ಅಂದು ಚಂದನವನದ ಸ್ಟಾರ್ ನಟ. ಅವರ ಪಾತ್ರಕ್ಕೆ ಪ್ರೇಕ್ಷಕರು ಮನ ಸೋತಿದ್ದರು. ಸಾಹಸ ಸಿಂಹ ಅವರೊಂದಿಗೆ ದ್ವಾರಕೀಶ್ ‘ಕಾಲವನ್ನು ತಡೆಯವವರು ಯಾರೂ ಇಲ್ಲ, ನನ್ನಿಂದ, ನಿನ್ನ, ನಿನ್ನಿಂದ ನನ್ನ’ ಹೇಳುತ್ತಾ ಜನಮನ ಗೆದ್ದಿದ್ದರು.

ಗುರುಕಿರಣ್ ಅವರು ಚಿತ್ರಕ್ಕೆ ಹಾಡು ನೀಡಿದ್ದರು. ‘ಪಟ ಪಟ ಹಾರೋ ಗಾಳಿಪಟ’ ‘ರಾ..ರಾ..’ ಹಾಡು ಆ ಕಾಲದಲ್ಲಿ ಹಿಟ್ ಲಿಸ್ಟ್ ಸೇರಿದ ಹಾಡುಗಳು. ಇಂದಿಗೂ ಆ ಗುಂಗು ಹಾಗೆಯೇ ಇದೆ. ರಾಜ್ಯದ ಸಂತೋಷ್ ಥಿಯೇಟರ್ ಸೇರಿದಂತೆ ಇತರ ಕಡೆಯೂ ಚಿತ್ರ ಒಂದು ವರ್ಷ ಭರ್ಜರಿಯಾಗಿ ಪ್ರದರ್ಶನ ಆಗಿತ್ತು.


ರಮೇಶ್ ಅರವಿಂದ್, ಸೌಂದರ್ಯ, ನಟಿ ಪ್ರೇಮಾ, ಸತ್ಯಜಿತ್, ದ್ವಾರಕೀಶ್, ಪ್ರಮೀಳಾ ಜೋಷಾಯ್, ಅವಿನಾಶ್ ಮುಂತಾದ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.


2004ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಗಳಿಸಿತ್ತು. ಈ ಸಿನಿಮಾಕ್ಕೆ ಐದು ಫಿಲ್ಮ್ ಫೇರ್ ಪ್ರಶಸ್ತಿಗಳು ಲಭಿಸಿವೆ.
ವಿಷ್ಣುವರ್ಧನ್, ಸೌಂದರ್ಯಾ ಅವರಿಗೆ ಅತ್ಯುತ್ತಮ ನಟ- ನಟಿ ಪ್ರಶಸ್ತಿ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ಪ್ರಶಸ್ತಿಗಳು ಸಿಕ್ಕಿದ್ದವು.


ಇದರೊಂದಿಗೆ ನಟ ರಮೇಶ್ ಅರವಿಂದ್ ಅವರ ಪಾತ್ರವೂ ಚಿತ್ರದಲ್ಲಿ ಪ್ರದಾನ ಪಾತ್ರವನ್ನು ಮಾಡಿದ್ದರು.


ಚಿತ್ರ ಬಿಡುಗಡೆ ಆಗಿ 18 ವರ್ಷಗಳು ಕಳೆದಿದ್ದು, ನಟ ರಮೇಶ್ ಅರವಿಂದ್ ಈ ಸಂತಸವನ್ನು ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಹಂಚಿಕೊಂಡಿದ್ದಾರೆ.


ಚಿತ್ರದಲ್ಲಿದ್ದು ವಿಷ್ಣುವರ್ಧನ್, ಸೌಂದರ್ಯ ನಿರ್ಮಾಪಕ ದ್ವಾರಕೀಶ್ ಹಾಗೂ ನಿರ್ದೇಶಕ ಪಿ.ವಾಸು ಅವರನ್ನು ನೆನೆದು ದೊಡ್ಡ ಥ್ಯಾಂಕ್ಸ್ ಹೇಳಿದ್ದಾರೆ. ವಿಷ್ಣುವರ್ಧನ್ ಹಾಗೂ ಸೌಂದರ್ಯ ಅವರೊಂದಿಗೆ ನಿಂತುಕೊಂಡ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

RELATED ARTICLES

Most Popular

Share via
Copy link
Powered by Social Snap