ನಟ ರಮೇಶ್ ಅರವಿಂದ್ ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. ಹತ್ತಾರು ಚಿತ್ರಗಳಲ್ಲಿ, ಹಲವಾರು ಭಿನ್ನ- ವಿಭಿನ್ನ ಪಾತ್ರಗಳಲ್ಲಿ ನಟಿಸಿ, ನಿರ್ದೇಶನದ ಮೂಲಕ ಹೊಸ ಪಾತ್ರಗಳನ್ನು ಸೃಷ್ಟಿಸುತ್ತಾ,ಪ್ರಯೋಗ ಮಾಡುತ್ತಾ ಬಂದಿರುವ ನಟನಿಗೆ ನಾಳೆ ಹುಟ್ಟು ಹಬ್ಬದ ಸಂಭ್ರಮ.
‘ವೀಕೆಂಡ್ ವಿತ್ ರಮೇಶ್’ ಬಳಿಕ ಟಿವಿಯಲ್ಲಿ ಬಂದು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾದ ರಮೇಶ್ ಅರವಿಂದ್, ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿಯೂ ಹೌದು. ಶಾಲಾ – ಕಾಲೇಜುಗಳಲ್ಲಿ
ಮೋಟಿವೇಷನಲ್ ಸ್ಪೀಚ್ ನೀಡುವ ಸ್ಪೀಕರ್ ಆಗಿರುವ ಅವರು, ಒಬ್ಬ ಬರಹಗಾರನು ಹೌದು.
ಇಂಥ ಸರಳ, ಸಜ್ಜನಿಕೆಯ ನಟನ ಹುಟ್ಟು ಹಬ್ಬ ಕೂಡ ಸರಳವಾಗಿ ಆಚರಿಸಿಲು ನಿರ್ಧರಿಸಿದ್ದಾರೆ. ಅವರು ಹುಟ್ಟು ಹಬ್ಬದಂದು ಅಭಿಮಾನಿಗಳಿಗೆ ಹಾಗೂ ಜನರಿಗೆ ವಿಶ್ ಮಾಡಲು ಅವಕಾಶವೊಂದನ್ನು ನೀಡಿದ್ದಾರೆ.
ರಮೇಶ್ ಅರವಿಂದ್ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಟೋರಿ ಹಂಚಿಕೊಂಡಿದ್ದಾರೆ. ಅವರ ವಾಟ್ಸಾಪ್ ನಂಬರ್ ಗೆ ಮೆಸೇಜ್ ಮಾಡಿ ನಾವು ಹುಟ್ಟು ಹಬ್ಬದ ಶುಭಾಶಯವನ್ನು ಕೋರಬಹುದು.
8951599009 ಮತ್ತು 8951699009 ಮೊಬೈಲ್ ಸಂಖ್ಯೆಗೆ ವಾಟ್ಸಪ್ ಸಂದೇಶ ಕಳಿಸುವ ಮೂಲಕ ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು. ವಿಶ್ ಮಾಡುವಾಗ ನಿಮ್ಮ ಊರು, ಹೆಸರನ್ನು ನಮೂದಿಸಿ.
ವಿಶೇಷವಾಗಿ ಹುಟ್ಟು ಹಬ್ಬದ ಸಂದೇಶ ಕೋರಿದವರ ಜೊತೆ ರಮೇಶ್ ಅರವಿಂದ್ ಅವರು ಮಾತಾನಾಡಲಿದ್ದಾರೆ.
ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್ – 2’ ಟೀಸರ್ ನಾಳೆ ರಿಲೀಸ್ ಆಗಲಿದೆ.
ಇತ್ತೀಚೆಗೆ ನಟ ಉಪೇಂದ್ರ ಅವರು ಕೂಡ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲು ಅಭಿಮಾನಿಗಳಿಗೆ ಅವಕಾಶ ನೀಡಿದ್ದಾರೆ.

