ದಳಪತಿ ವಿಜಯ್ ಅವರ ‘ವಾರಿಸು’ ಕಾಲಿವುಡ್ ನಲ್ಲಿ ಧೂಳು ಎಬ್ಬಿಸುತ್ತಿದೆ. 125 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಕಾಲಿವುಡ್ ನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ‘ವಿಕ್ರಮ್’ ಹಿಟ್ ಬಳಿಕ ದಳಪತಿ ವಿಜಯ್ ಅವರೊಂದಿಗೆ ‘Talapathy67’ ನಲ್ಲಿ ಬ್ಯುಸಿಯಾಗಿದ್ದಾರೆ.
‘ಮಾಸ್ಟರ್’ ನಿಂದ ಹಿಟ್ ಆದ ಲೋಕೇಶ್ – ವಿಜಯ್ ಜೋಡಿ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
ಚೆನ್ನೈನಲ್ಲಿ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಚಿತ್ರ ತಂಡ ನಿರತವಾಗಿದೆ. ಈ ನಡುವೆ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ವೊಂದು ಹೊರಬಿದ್ದಿದೆ.
‘777 ಚಾರ್ಲಿ’ ಮತ್ತೊಮ್ಮೆ ಮೋಡಿ ಮಾಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ದಳಪತಿ ವಿಜಯ್ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿಗೊಂದ ಹೊರ ಬಿದ್ದಿದೆ.
ಮೂಲಗಳ ಪ್ರಕಾರ ಇದನ್ನು ರಕ್ಷಿತ್ ಶೆಟ್ಟಿ ಇನ್ನು ಒಪ್ಪಿಕೊಂಡಿಲ್ಲ. ಆದರೆ ಮಾತುಕತೆಯಲ್ಲಿ ಚಿತ್ರ ತಂಡ ನಿರತವಾಗಿದೆ ಎನ್ನಲಾಗುತ್ತಿದೆ.
ದಳಪತಿ ಅವರ ಈ ಸಿನಿಮಾದಲ್ಲಿ ಈಗಾಗಲೇ ಸಂಜಯ್ ದತ್, ತ್ರಿಶಾ, ಗೌತಮ್ ಮೆನನ್, ಮಿಸ್ಕಿನ್ ಮತ್ತು ಪ್ರಿಯಾ ಆನಂದ್ ನಟಿಸುತ್ತಿದ್ದಾರೆ.

