ಬಾಲಿವುಡ್ ನ ಖ್ಯಾತ ಹಾಸ್ಯನಟ ರಾಜುಶ್ರಿವಾಸ್ತವ್ ಬುಧವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
‘ತೇಜಾಬ್’, ‘ಮೈನೆ ಪ್ಯಾರ್ ಕಿಯಾ’, ‘ಮೈನೆ ಪ್ಯಾರ್ ಕಿಯಾ”, ‘ಮೈನೆ ಪ್ಯಾರ್ ಕಿಯಾ’,
ವಾಹ್! ತೇರಾ ಕ್ಯಾ ಕೆಹನಾ’ ‘ಬಾಂಬೆ ಟು ಗೋವಾ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.
ಹಿಂದಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಕಪಿಲ್ ಶರ್ಮಾ ಶೋ’ ಹಾಗೂ ಬಿಗ್ ಬಾಸ್ ನಲ್ಲೂ ಅವರು ಭಾಗವಹಿಸಿದ್ದರು.
ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ರಾಜು ಅವರನ್ನು ಆಗಸ್ಟ್ 10 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಬುಧವಾರ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಮೂಲಗಳು ಮಾಧ್ಯಮಗಳಿಗೆ ದೃಢಪಡಿಸಿದೆ.

