ನಟ ರಾಜ್ ಬಿ ಶೆಟ್ಟಿ ಸದ್ಯ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಪೋಸ್ಟ್ ಪ್ರೂಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗಷ್ಟೇ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಈ ನಡುವೆ ಮಲಯಾಳಂ ಸಿನಿಮಾವೊಂದರಲ್ಲಿ ಕರಾವಳಿಯ ಪ್ರತಿಭೆ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.
ಈಗ ರಾಜ್ ಬಿ ಶೆಟ್ಟಿ ಅವರು ಹೊಸ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಕುರಿತು ಅಪ್ಡೇಟ್ ವೊಂದು ಹೊರ ಬಿದ್ದಿದೆ. ರಾಜ್ ಬಿ ಶೆಟ್ಟಿ ಅವರ ‘ಒಂದು ಮೊಟ್ಟೆಯ ಕಥೆ’ ಸೇರಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹೊಸ ಸಿನಿಮಾವನ್ನು ಬಾಸಿಲ್ ಅಲ್ಚಲಕ್ಕಲ್ ಪೊಗರು ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಇದೊಂದು ರಿವೆಂಜ್ ಡ್ರಾಮಾ ಸಿನಿಮಾವಾಗಿದ್ದು, ಪ್ರವೀಣ್ ಶ್ರೀಯಾನ್ ಛಾಯಗ್ರಹಣ ಮಿಧುನ್ ಮುಕುಂದನ್ ಮ್ಯೂಸಿಕ್ ನೀಡಲಿದ್ದಾರೆ.

