ಟೀಮ್ ಇಂಡಿಯಾ ಟಿ-20 ವಿಶ್ವ ಕಪ್ ನಲ್ಲಿ ಸೆಮಿಗೆ ಲಗ್ಗೆಯಿಟ್ಟಿದೆ. ಗುರುವಾರ ಇಂಗ್ಲೆಂಡ್ ವಿರುದ್ದ ಸೆಮಿ ಆಡಲಿದೆ.
ಸೂರ್ಯ ಕುಮಾರ್ ಯಾದವ್ ಈ ಬಾರಿ ಬ್ಯಾಟಿಂಗ್ ನಲ್ಲಿ ಮಿಂಚುತ್ತಿದ್ದಾರೆ. ಅವರ ಭರ್ಜರಿ ಬ್ಯಾಟಿಂಗ್ ನಿಂದ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲೂ ಸೂರ್ಯ ಭರ್ಜರಿ ಅರ್ಧ ಶತಕಗಳಿಸಿದ್ದರು.
ಅವರ 360 ಡಿಗ್ರಿ ಬ್ಯಾಟಿಂಗ್ ಶೈಲಿಗೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಕೋಚ್ ರಾಹುಲ್ ದ್ರಾವಿಡ್ ಅವರು ಕೂಡ ಸೂರ್ಯ ಬ್ಯಾಟಿಂಗ್ ನ್ನು ಹೊಗಳಿದ್ದಾರೆ.
“ಸೂರ್ಯಕುಮಾರ್ ಯಾದವ್ ಒಬ್ಬ ಅಸಾಧಾರಣ ಬ್ಯಾಟರ್. ಅವರ ಬ್ಯಾಟಿಂಗ್ ನೋಡುವುದೇ ಸಂತೋಷ. ಅವರು ಆ ರೀತಿಯ ಫಾರ್ಮ್ ನಲ್ಲಿರುವಾಗ ಬ್ಯಾಟಿಂಗ್ ಮಾಡುವುದನ್ನು ನೋಡಲು ಖುಷಿಯಾಗುತ್ತದೆ. ಪ್ರತಿ ಬಾರಿಯೂ, ಅವರಿಲ್ಲಿ ಪ್ರದರ್ಶನವೊಂದನ್ನು ಆಯೋಜನೆ ಮಾಡಿದಂತೆ ಆಡುತ್ತಾರೆ. ಸ್ಟ್ರೈಕ್ ರೇಟ್ ನಲ್ಲಿ ಸ್ಥಿರವಾಗಿ ಆಡುವುದು ಸುಲಭವಲ್ಲ. ಸೂರ್ಯ ಆಡುತ್ತಿರುವ ರೀತಿ ಅದ್ಭುತವಾಗಿದೆ. ಸೂರ್ಯ ತಮ್ಮ ತಂತ್ರಗಳ ಬಗ್ಗೆ ತುಂಬಾ ಸ್ಪಷ್ಟವಾಗಿದ್ದಾರೆ” ಎಂದಿದ್ದಾರೆ.

