ಕನ್ನಡ ಚಿತ್ರರಂಗದಲ್ಲಿ ಅಂದಿನಿಂದಲೂ ಕಾದಂಬರಿ ಆಧಾರಿತ ಸಿನಿಮಾಗಳಿಗೆ ಅದರದ್ದೇ ಆದಂತಹ ಬೆಲೆಯಿದೆ. ಇದೀಗ ಹೊಸದಾಗಿ ಇನ್ನೊಂದು ಕಾದಂಬರಿಯನ್ನ ಆಧರಿಸಿದ ಸಿನಿಮಾವೊಂದು ಬರುತ್ತಿದೆ. ಸ್ವತಂತ ಪೂರ್ವದ ಕಥೆಯಿರುವ ‘ಶಾನುಭೋಗರ ಮಗಳು’ ಎಂಬ ಕಾದಂಬರಿಯನ್ನ ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರು. ಶಾನುಭೋಗರ ಮಗಳಾಗಿ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಅವರು ನಟಿಸುತ್ತಿದ್ದಾರೆ.


ಟಿಪ್ಪು ಸುಲ್ತಾನ್, ಬ್ರಿಟಿಷರು, ಹಾಗು ಮೈಸೂರಿನ ಮಹಾರಾಜರುಗಳ ಕಥೆಯಿರುವ ಈ ‘ಶಾನುಭೋಗರ ಮಗಳು’ ಕಾದಂಬರಿಯನ್ನ ಭಾಗ್ಯ ಕೆ ಮೂರ್ತಿ ಅವರು ಬರೆದಿದ್ದಾರೆ. ಮೂರು ನಾಲ್ಕು ಬ್ರಿಟಿಷರನ್ನು ಗುಂಡಿಕ್ಕಿ ಕೊಲ್ಲುವ ದಿಟ್ಟ ಮಹಿಳೆ ಈ ‘ಶಾನುಭೋಗರ ಮಗಳು’. ಈ ದೃಶ್ಯಗಳನ್ನ ನಾಯಕಿ ರಾಗಿಣಿ ಅವರು ಮೇಲುಕೋಟೆ, ಶ್ರೀರಂಗಪಟ್ಟಣ ಹಾಗು ಕುಂತಿ ಬೆಟ್ಟದ ಸುತ್ತಮುತ್ತ ಚಿತ್ರೀಕರಿಸಿ ನೆರವೇರಿಸಿದ್ದಾರೆ. ಭುವನ್ ಫಿಲಂಸ್ ಎಂಬ ಬ್ಯಾನರ್ ಅಡಿಯಲ್ಲಿ ಈ ‘ಶಾನುಭೋಗರ ಮಗಳು’ ನಿರ್ಮಾಣಗೊಳ್ಳುತ್ತಿದೆ.
ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಕಿಶೋರ್ ಅವರು ಬಣ್ಣ ಹಚ್ಚಿದ್ದಾರೆ. ಇನ್ನು ಇವರ ಜೊತೆಗೆ ಸುಧಾ ಬೆಳವಾಡಿ, ರಮೇಶ್ ಭಟ್, ಪದ್ಮ ವಸಂತಿ, ಕುಮಾರಿ ಅನನ್ಯ, ಭಾಗ್ಯಶ್ರೀ, ಟಿ ಎನ್ ಶ್ರೀನಿವಾಸ್ ಮೂರ್ತಿ, ನಿರಂಜನ ಶೆಟ್ಟಿ ಮುಂತಾದವರು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಮಿತ ಮಲ್ನಾಡ್ ಅವರ ಸಂಗೀತ ಬಿ ಎ ಮಧು ಅವರ ಚಿತ್ರಕತೆ ಸಂಭಾಷಣೆ, ಜೈ ಆನಂದ್ ಅವರ ಛಾಯಾಗ್ರಾಹಣ, ಕೆಂಪರಾಜು ಅವರ ಸಂಕಲನ ಈ ಸಿನಿಮಾಗಿದೆ.

