HomeNewsತುಪ್ಪದ ಬೆಡಗಿಯ ಹುಟ್ಟುಹಬ್ಬಕ್ಕೆ ಚಿತ್ರರಂಗಕ್ಕೇ ಉಚಿತ ಆರೋಗ್ಯ ತಪಾಸಣೆ

ತುಪ್ಪದ ಬೆಡಗಿಯ ಹುಟ್ಟುಹಬ್ಬಕ್ಕೆ ಚಿತ್ರರಂಗಕ್ಕೇ ಉಚಿತ ಆರೋಗ್ಯ ತಪಾಸಣೆ

ತಮ್ಮ ನಟನೆ, ನೃತ್ಯ ಸುಂದರ ಮೈಮಾಟದಿಂದ ಕನ್ನಡಿಗರಿಗೆ ಚಿರಪರಿಚಿತರಾದವರು ನಟಿ ರಾಗಿಣಿ ದ್ವಿವೇದಿ. ‘ತುಪ್ಪದ ಬೆಡಗಿ’ ಎಂದೇ ಕರೆಸಿಕೊಳ್ಳುವ ಇವರು ಹಲವು ಹಿಟ್ ಸಿನಿಮಾಗಳಲ್ಲಿ ಪ್ರಖ್ಯಾತ ಹಾಡುಗಳಲ್ಲಿ ಅಭಿನಯಿಸಿದ್ದಾರೆ. ಈಗಲೂ ಬ್ಯುಸಿಯಾಗಿರುವ ಇವರ ಜನ್ಮದಿನದ ಸಲುವಾಗಿ ಒಂದೊಳ್ಳೆ ಕೆಲಸಕ್ಕೆ ಇವರ ಸಂಸ್ಥೆ ಹಾಗು ಅಭಿಮಾನಿಗಳ ಸಂಘ ಸಜ್ಜಾಗಿದೆ. ಇದೆ ಮೇ 24ರಂದು ರಾಗಿಣಿ ಅವರ ಜನ್ಮದಿನ. ಆ ದಿನ ಇಡೀ ಚಿತ್ರರಂಗಕ್ಕೇ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹಾಗು ಇನ್ನು ಇತರ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ರಾಗಿಣಿ ಅವರ ‘ಜೆನೆಸ್ಟ್ ಚಾರಿಟೇಬಲ್ ಟ್ರಸ್ಟ್’ ಹಾಗು ರಾಗಿಣಿ ದ್ವಿವೇದಿ ಅಭಿಮಾನಿಗಳ ಸಂಘ ಸೇರಿ ಈ ಶುಭಕಾರ್ಯಕ್ಕೆ ಕೈ ಹಾಕಿದ್ದಾರೆ.

ಇದೆ ಮೇ 24ರಂದು ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವವರಿಗೆ ಮಾತ್ರ ಮುಕ್ತ ಅವಕಾಶವಿರಲಿದೆ. ಬೆಳಿಗೆ 11ರಿಂದ ಸಂಜೆ 5ರ ವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಉಚಿತ ಆರೋಗ್ಯ ತಪಾಸಣೆ, ರಕ್ತದಾನ, ಚಿತ್ರರಂಗದಲ್ಲಿ ಕಲಾಸೇವೆ ಮಾಡಿದಂತಹ ಹಿರಿಯ ತಂತ್ರಜ್ಞರ ಸನ್ಮಾನ, ‘ಜೆನೆಸ್ಟ್’ ಟ್ರಸ್ಟ್ ನ ಮುಂದಿನ ಕಾರ್ಯಕ್ರಮಗಳ ವರದಿ, ಉಚಿತ ಮಧ್ಯಾಹ್ನ ಭೋಜನ ಇವೆಲ್ಲವೂ ಈ ಕಾರ್ಯಕ್ರಮದ ಭಾಗವಾಗಿರಲಿವೆ. ಒಟ್ಟಿನಲ್ಲಿ ರಾಗಿಣಿ ಅವರ ಜನ್ಮದಿನದಂದು ಒಂದು ಉತ್ತಮ ಕೆಲಸಕ್ಕೆ ಕನ್ನಡ ಚಿತ್ರರಂಗ ಸಾಕ್ಷಿಯಾಗಲಿದೆ.

RELATED ARTICLES

Most Popular

Share via
Copy link
Powered by Social Snap