ನಟಿ ರಾಗಿಣಿ ದ್ವಿವೇದಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣದ ವೇಳೆ ಅವರು ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ.
ರಾಗಿಣಿ ಅಭಿನಯದ ‘ಕಮಾಂಡೋ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚೆನ್ನೈನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಭಾಗಿಯಾಗಿದ್ದಾರೆ. ಇದೇ ಚಿತ್ರೀಕರಣದ ಸಂದರ್ಭದಲ್ಲಿ ರಾಗಿಣಿ ಅವರ ಕೈಗೆ ಏಟು ಬಿದ್ದಿದೆ.
ಸದ್ಯ ತಾನು ಆರಾಮವಾಗಿದ್ದೇನೆ ಶೀಘ್ರದಲ್ಲಿ ಮತ್ತೆ ಶೂಟಿಂಗ್ ಸ್ಪಾಟ್ ಗೆ ಬರುತ್ತೇನೆ ಎಂದು ಕೈಗೆ ತಾಗಿ ಏಟು, ಬ್ಯಾಂಡೇಜ್ ಸುತ್ತಿರುವ ಕೈಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತನ್ನ ನೆಚ್ಚಿನ ನಟಿ ಆದಷ್ಟು ಬೇಗ ಚೇತರಿಕೆ ಆಗಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.

