HomeNewsಯೂಟ್ಯೂಬ್ ಟ್ರೆಂಡಿಂಗ್ ಪಟ್ಟಿಯ ಎರಡನೇ ಸ್ಥಾನದಲ್ಲಿ 'ರಾಘವೇಂದ್ರ ಸ್ಟೋರ್ಸ್'ನ 'ಸಿಂಗಲ್ ಸುಂದರ' ಹಾಡು

ಯೂಟ್ಯೂಬ್ ಟ್ರೆಂಡಿಂಗ್ ಪಟ್ಟಿಯ ಎರಡನೇ ಸ್ಥಾನದಲ್ಲಿ ‘ರಾಘವೇಂದ್ರ ಸ್ಟೋರ್ಸ್’ನ ‘ಸಿಂಗಲ್ ಸುಂದರ’ ಹಾಡು

ಸದ್ಯ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿರುವ ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲಂಸ್’ ಹಲವು ಸಿನಿಮಾಗಳ ನಿರ್ಮಾಣದಲ್ಲಿ ಮಗ್ನವಾಗಿದೆ. ಆಕ್ಷನ್ ಸಿನಿಮಾಗಳು, ಪಾನ್ ಇಂಡಿಯನ್ ಸಿನಿಮಾಗಳು ಮಾತ್ರವಲ್ಲದೆ, ಕೌಟುಂಬಿಕ ಸಿನಿಮಾಗಳು ಕೂಡ ಇವೆ. ಸದ್ಯ ಇವರ ನಿರ್ಮಾಣದ ಚಿತ್ರಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವುದು, ಕನ್ನಡದ ನೆಚ್ಚಿನ ಹಾಸ್ಯನಾಯಕ ನವರಸ ನಾಯಕ ಜಗ್ಗೇಶ್ ಅವರ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ. ಸಂತೋಷ್ ಆನಂದ್ ರಾಮ್ ನಿರ್ಮಾಣದ ಈ ಸಿನಿಮಾ ಇದೇ ಏಪ್ರಿಲ್ 28ಕ್ಕೆ ಎಲ್ಲೆಡೆ ಭರ್ಜರಿ ಬಿಡುಗಡೆ ಕಾಣುತ್ತಿದೆ. ಸದ್ಯ ಸಿನಿಮಾದ ಮೊದಲ ಹಾಡು ‘ಸಿಂಗಲ್ ಸುಂದರ ಯಾವಾಗ ಹಾಕ್ತೀಯ ಉಂಗುರ’ವನ್ನ ಚಿತ್ರತಂಡ ಬಿಡುಗಡೆ ಮಾಡಿದ್ದು, ಈ ಹಾಡು ಎಲ್ಲರ ಮೆಚ್ಚುಗೆ ಪಡೆಯುತ್ತಾ, ಯೂಟ್ಯೂಬ್ ನಲ್ಲಿ ಒಂದು ಮಿಲಿಯನ್ ವೀಕ್ಷಣೆಗೆ ಸನ್ನಿಹಿತವಾಗುತ್ತಿದೆ. ಅಷ್ಟೇ ಅಲ್ಲದೇ ಯೂಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲೂ ದ್ವಿತೀಯ ಸ್ಥಾನ ಏರಿದೆ.

ಅಜನೀಶ್ ಲೋಕನಾಥ್ ಅವರ ಸಂಗೀತ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗು ಹೆಸರಾಂತ ಚಿತ್ರಸಾಹಿತಿ ನಾಗಾರ್ಜುನ ಶರ್ಮ ಅವರ ಸಾಹಿತ್ಯ ಇರುವ ಈ ಹಾಡನ್ನು ವಿಜಯ ಪ್ರಕಾಶ್ ಅವರು ಹಾಡಿದ್ದಾರೆ. ಚಹಾಡಿನ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಎಂದಿನಂತೆ ಜಗ್ಗಣ್ಣ ತಮ್ಮ ಮನಮುಟ್ಟುವ ಮನರಂಜಿತಾ ಹಾಸ್ಯಭಾವದ ಅಭಿನಯದಿಂದ ಜನಮನ ಗೆಲ್ಲುತ್ತಿದ್ದಾರೆ. ಚಿತ್ರದಲ್ಲಿ ಜಗ್ಗಣ್ಣನದು ವಯಸ್ಸಾದರೂ ಮದುವೆಯಾಗದ ಬ್ರಹ್ಮಚಾರಿಯ ಪಾತ್ರ. ಅದಕ್ಕೆ ಈ ಹಾಡಿನಲ್ಲಿ ಮದುವೆಯ ಬಗ್ಗೆ, ಮದುವೆಯಾಗದೆ ಕಾಯುತ್ತಿರುವವರ ಹಾಗೂ, ಮದುವೆಯಾಗಿರುವವರ ಬಗ್ಗೆ ಹಾಸ್ಯಭರಿತವಾಗಿ ಹೇಳಲಾಗಿದೆ. ಎಲ್ಲಾ ಸಿಂಗಲ್ ಗಳಿಗೇ ಈ ಹಾಡನ್ನು ಸಮಾರ್ಪಿತ ಮಾಡಿದೆ ಚಿತ್ರತಂಡ. ಈಗಾಗಲೇ 9 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿರುವ ಈ ಹಾಡು ಸದ್ಯದಲ್ಲಿ ಹತ್ತು ಲಕ್ಷದ ಗಡಿ ದಾಟಲಿದೆ. ಜಗ್ಗಣ್ಣನ ಅಭಿನಯಕ್ಕೆ ಮನಸೋಲದವರೇ ಇಲ್ಲ.

ನಟರಾಕ್ಷಸ ಡಾಲಿ ಧನಂಜಯ ಅವರಿಂದ ಹಾಡು ಬಿಡುಗಡೆಯ ಘೋಷಣೆ ಮಾಡಿಸಿ, ನಟ ನಿರ್ದೇಶಕ ರಕ್ಷಿತ್ ಶೆಟ್ಟಿಯವರ ಕೈಯಲ್ಲಿ ಈ ಹಾಡನ್ನು ಬಿಡುಗಡೆ ಮಾಡಿಸಲಾಯಿತು. ಹಾಸ್ಯದಲ್ಲಿ ಪ್ರಭುದ್ಧತೆ ಮೆರೆದಿರುವ ಜಗ್ಗಣ್ಣ ಅವರ ಜೊತೆಗೇ ರವಿಶಂಕರ್ ಗೌಡ ಅವರು ಕೂಡ ಸೇರಿ, ನೋಡುಗರಿಗೆ ಮನರಂಜನೆಯ ರಸದೌತಣವನ್ನ ಈ ಹಾಡಿನಲ್ಲೇ ಬಡಿಸಿಟ್ಟಿದ್ದಾರೆ. ಜಗ್ಗೇಶ್ ಅವರ ಅಭಿನಯ ಎಂತವರನ್ನದರೂ ನಗಿಸುವಂತದ್ದು. ಅದರಲ್ಲೂ ಸಂಪೂರ್ಣ ಹಾಸ್ಯಮಯ ಪಾತ್ರ, ಕಥೆ ಎಲ್ಲವೂ ಇದ್ದರೆ ಅವರ ಅಭಿನಯಕ್ಕೆ ಸಾಟಿಯೇ ಇಲ್ಲ. ಹಾಡಿನ ವಿಡಿಯೋ ಸಾಂಗ್ ಯೂಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಸದ್ಯ ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಪಕ್ಕ ಹಾಸ್ಯಮಯ ಕೌಟುಂಬಿಕ ಸಿನಿಮಾವನ್ನ ನೋಡಲು ಕನ್ನಡಿಗರಂತೂ ಕಾತುರದಿಂದ ಕಾಯುತ್ತಿದ್ದಾರೆ. ಇದೇ ಏಪ್ರಿಲ್ 28ಕ್ಕೆ ಸಿನಿಮಾ ಬೆಳ್ಳಿತೆರೆಯ ಮೇಲೆ ಬಿಡುಗಡೆಯಾಗಲಿದೆ.

RELATED ARTICLES

Most Popular

Share via
Copy link
Powered by Social Snap