HomeNews'ರಾಘವೇಂದ್ರ ಸ್ಟೋರ್ಸ್': ಚಿತ್ರದ ಬಗ್ಗೆ ಮನಬಿಚ್ಚಿದ ನವರಸ ನಾಯಕ. ಬಿಡುಗಡೆಯ ಬಗ್ಗೆ ಸುಳಿವು!!

‘ರಾಘವೇಂದ್ರ ಸ್ಟೋರ್ಸ್’: ಚಿತ್ರದ ಬಗ್ಗೆ ಮನಬಿಚ್ಚಿದ ನವರಸ ನಾಯಕ. ಬಿಡುಗಡೆಯ ಬಗ್ಗೆ ಸುಳಿವು!!

ನವರಸ ನಾಯಕ ಜಗ್ಗೇಶ್ ಅವರು ದಶಕಗಳಿಂದ ಚಂದನವನದಲ್ಲಿ ನಟಿಸುತ್ತಾ, ಗಣ್ಯ ನಟರು ಎನಿಸಿಕೊಂಡವರು. ಇದುವರೆಗೂ ಹಲವು ಬಗೆಯ ಸಿನಿಮಾಗಳಲ್ಲಿ ನಟಿಸಿರುವ ಇವರು ತಮ್ಮ ವಿಶೇಷ ನಟನೆಯಿಂದ ಕನ್ನಡಿಗರ ಮನಗಳಲ್ಲಿ ಖಾಯಂ ಜಾಗವನ್ನ ಪಡೆದುಕೊಂಡಿರುವವರು. ಸದ್ಯ ಬಿಡುಗಡೆಗೆ ಸಿದ್ದವಾಗಿರುವ, ಜಗ್ಗೇಶ್ ಅವರ ಮುಂದಿನ ಸಿನಿಮಾವೆಂದರೆ ಅದು ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದ ‘ರಾಘವೇಂದ್ರ ಸ್ಟೋರ್ಸ್’. ಈ ಚಿತ್ರದ ಬಗ್ಗೆ ಜಗ್ಗೇಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ರಾಘವೇಂದ್ರ ಸ್ಟೋರ್ಸ್ ಸಿನಿಮಾ ನೋಡಿದೆ. ಅದ್ಭುತ ನಿರ್ದೇಶನ, ಅದ್ಭುತ ಸಂಗೀತ, ಅದ್ಭುತ ಸಂಕಲನ ಹಾಗು ಅದ್ಭುತ ಛಾಯಾಗ್ರಹಣ. ಹೊಂಬಾಳೆ ಫಿಲಂಸ್ ಸಂಸ್ಥೆಯವರಿಂದ ಇದು ಇನ್ನೊಂದು ಅದ್ಭುತ ಸಿನಿಮಾ. ಇಂತಹ ಒಳ್ಳೆಯ ಚಿತ್ರ ಕಟ್ಟಿಕೊಟ್ಟಿದ್ದಕ್ಕಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಧನ್ಯವಾದಗಳು. ನನ್ನ ಪ್ರಕಾರ ಈ ಸಿನಿಮಾ ಕನ್ನಡಿಗರ ಮನಗೆಲ್ಲುತ್ತದೆ. ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ” ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಫೋಟೋ ಒಂದರ ಜೊತೆಗೆ ಬರೆದು ಹಂಚಿಕೊಂಡಿದ್ದಾರೆ. ‘ರಾಘವೇಂದ್ರ ಸ್ಟೋರ್ಸ್’ ಒಂದು ಕುಟುಂಬವಿಡೀ ನೋಡುವಂತಹ ಹಾಸ್ಯಭರಿತ ಸಿನಿಮಾ. ಬಹಳ ಹಿಂದೆಯೇ ಬಿಡುಗಡೆಯಾಗಿದ್ದ ಈ ಚಿತ್ರದ ಟೀಸರ್ ಪ್ರೇಕ್ಷಕರನ್ನ ನಗಿಸುತ್ತಾ, ಸಿನಿಮಾದ ಬಗೆಗೆ ನಿರೀಕ್ಷೆ ಹುಟ್ಟುವಂತೆ ಮಾಡಿತ್ತು. ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’, ‘ರಾಜಕುಮಾರ’, ‘ಯುವರತ್ನ’ದಂತಹ ಮನೋರಂಜಿತ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ನೀಡಿರುವ, ಸ್ಟಾರ್ ನಿರ್ದೇಶಕರು ಎನಿಸಿಕೊಂಡಿರುವ ಸಂತೋಷ್ ಆನಂದ್ ರಾಮ್ ಅವರೇ ಈ ಸಿನಿಮಾದ ಸೃಷ್ಟಿಕರ್ತರು. ಚಿತ್ರದಲ್ಲಿರುವ ಬಿ ಅಜನೀಶ್ ಲೋಕನಾಥ್ ಅವರ ಸಂಗೀತದ ಜೊತೆಗೆ ‘ಹೊಂಬಾಳೆ ಫಿಲಂಸ್’ನಂತಹ ದೈತ್ಯ ಸಿನಿಮಾ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ಸಿನಿಮಾದ ಬಗೆಗಿನ ನಿರೀಕ್ಷೆ ಹೆಚ್ಚಿಸುತ್ತಿರೋ ಇತರ ಅಂಶಗಳು.

ನವರಸ ನಾಯಕ ಜಗ್ಗೇಶ್ ಅವರ ಜೊತೆ ಶ್ವೇತಾ ಶ್ರೀವಾಸ್ತವ ಹಾಗು ರವಿಶಂಕರ್ ಗೌಡ ಅವರ ಜೊತೆಗೆ ಇತರರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ 2022ರ ಆಗಸ್ಟ್ ತಿಂಗಳಿನಲ್ಲೇ ಬಿಡುಗಡೆಯಾಗುವುದಾಗಿ ನಿರ್ಧಾರವಾಗಿತ್ತು. ಈ ಬಗೆಯ ಎಲ್ಲಾ ತಯಾರಿಗಳ ನಂತರ ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯನ್ನ ಮುಂದೂಡಲಾಗಿತ್ತು. ಇಂದು ಜಗ್ಗೇಶ್ ಅವರು ಹಂಚಿಕೊಂಡ ಫೋಟೋಗೆ ಅಭಿಮಾನಿಯೊಬ್ಬರು, “ಸಿನಿಮಾ ಬಿಡುಗಡೆ ಯಾವಾಗ?” ಎಂದು ಕೇಳಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಜಗ್ಗೇಶ್ ಅವರು ಏಪ್ರಿಲ್ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಾಗಿ ಸಿನಿಮಾ ಇದೇ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

RELATED ARTICLES

Most Popular

Share via
Copy link
Powered by Social Snap