HomeNews'ತಲೈವಿ' ಜಯಲಲಿತ ಸಮಾಧಿ ಬಳಿ ಕಂಡ ರಚಿತಾ ರಾಮ್! ತಮಿಳು ಚಿತ್ರರಂಗ ತಲುಪಲಿದ್ದಾರ ಡಿಂಪಲ್ ಕ್ವೀನ್!?

‘ತಲೈವಿ’ ಜಯಲಲಿತ ಸಮಾಧಿ ಬಳಿ ಕಂಡ ರಚಿತಾ ರಾಮ್! ತಮಿಳು ಚಿತ್ರರಂಗ ತಲುಪಲಿದ್ದಾರ ಡಿಂಪಲ್ ಕ್ವೀನ್!?

ಕನ್ನಡ ಚಿತ್ರರಂಗದ ಸ್ಟಾರ್ ನಟಿ, ಅಪಾರ ಅಭಿಮಾನಿಗಳ ನೆಚ್ಚಿನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಬಗ್ಗೆ ಯಾರಿಗೇ ತಾನೇ ಗೊತ್ತಿಲ್ಲ. ಕಿರುತೆರೆಯ ಧಾರವಾಹಿಗಳ ಮೂಲಕ ಬಣ್ಣದ ಲೋಕಕ್ಕೆ ಬಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಬಂದಂತಹ ರಚಿತಾ ಹಿಂತಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ಸ್ಟಾರ್ ನಟರ ಜೊತೆಗೆ ನಟಿಸುತ್ತಾ, ಹಲವು ಹಿಟ್ ಸಿನಿಮಾಗಳನ್ನ ನೀಡುತ್ತಾ ಬಂದಿರುವವರು. ಸದ್ಯ ರಚಿತಾ ಅವರ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ತಲೈವಿ ಜಯಲಲಿತಾ ಅವರ ಸಮಾಧಿಯ ಬಳಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಎಲ್ಲೆಡೆ ಹರಿದಾಡುತ್ತಿರುವ ಈ ಫೋಟೋಗಳು ಅಭಿಮಾನಿಗಳಲ್ಲಿ ಹಲವು ಅನುಮಾನಗಳನ್ನ ಹುಟ್ಟಿಹಾಕುತ್ತಿವೆ.

ರಚಿತಾ ಅವರು ಮೊದಲಿನಿಂದಲೂ ಜಯಲಲಿತಾ ಅವರನ್ನ ಮೆಚ್ಚುತ್ತ ಬಂದವರು. ಸದ್ಯ ನಮ್ಮ ಡಿಂಪಲ್ ಬೆಡಗಿ ಸಿಂಪಲ್ ಉಡುಗೆಯಲ್ಲಿ ಜಯಲಲಿತಾ ಅವರ ಸಮಾಧಿಯ ಬಳಿ ಓಡಾಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಈ ಫೋಟೋಗಳನ್ನ ಯಾರೋ ಹೊರಗಿನವರು, ರಚಿತಾ ಅವರಿಗೆ ಗೊತ್ತಿಲ್ಲದೇ ತೆಗೆದಿರುವ ಹಾಗಿದೆ. ಇವುಗಳನ್ನ ಕಂಡಿರುವ ಕನ್ನಡಿಗರು ಹಾಗಾದರೆ ರಚಿತಾ ಅಲ್ಲೇನು ಮಾಡುತ್ತಿದ್ದಾರೆ? ತಮಿಳು ಸಿನಿಮಾ ಏನಾದರೂ ಮಾಡುತ್ತಿದ್ದಾರ? ಅಥವಾ ಇನ್ಯಾವುದಾದರೂ ಸಿನಿಮಾ ಸಂಭಂದಿ ಪ್ರಮುಖ ಕೆಲಸಗಳಿವೆಯಾ? ಎಂಬ ತಮ್ಮ ಅನುಮಾನಗಳನ್ನ ಹೊರಹಾಕುತ್ತಿದ್ದಾರೆ. ಆದರೆ ಯಾವುದೇ ನಿಖರವಾದ ಮಾಹಿತಿ ಈ ವಿಚಾರದಲ್ಲಿ ಈ ವರೆಗೆ ಬಂದಿಲ್ಲ. ಇದಕ್ಕೆಲ್ಲ ಸ್ವತಃ ರಚಿತಾ ರಾಮ್ ಅವರೇ ಉತ್ತರಿಸಬೇಕಿದೆ.

RELATED ARTICLES

Most Popular

Share via
Copy link
Powered by Social Snap