ಭರತ್ ವಿಷ್ಣುಕಾಂತ್ ಕಥೆ,ಚಿತ್ರಕಥೆ, ನಿರ್ದೇಶನದ ‘ರೇಸರ್’ ಸಿನಿಮಾದ ಟೈಟಲ್ ಪೋಸ್ಟರ್ ಇತ್ತೀಚೆಗೆ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಆಯಿತು.
ಪ್ರೊಫೆಷನಲ್ ಬೈಕ್ ರೇಸರ್ ಆಗಿರುವ ಸಂದೇಶ್ ಪ್ರಸನ್ನ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಧ್ವಿತಿ ಶೆಟ್ಟಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾದ ಬಗ್ಗೆ ಮಾತಾನಾಡುವ ನಿರ್ದೇಶಕ ಭರತ್ ಸಿನಿಮಾದಲ್ಲಿ ಸಾಹಸಮಯ ದೃಶ್ಯಗಳಿವೆ. ಸಿನಿಮಾದಲ್ಲಿನ ಬೈಕ್ ಸ್ಟಂಟ್ ಗಳನ್ನು ನಾಯಕ ಸಂದೇಶ್ ಅವರೇ ಮಾಡಲಿದ್ದಾರೆ . ಸಿನಿಮಾದ ಆ್ಯಕ್ಷನ್ ದೃಶ್ಯವನ್ನು ಬುದ್ದ ಇಂಟರ್ ನ್ಯಾಶನಲ್ ಸರ್ಕ್ಯೂಟ್ ನಲ್ಲಿ ನಡೆಯಲಿದೆ. ಈ ದೃಶ್ಯದಲ್ಲಿ ಅನೇಕ ಅಂತಾರಾಷ್ಟ್ರೀಯ ಬೈಕ್ ರೇಸರ್ ಗಳು ಭಾಗಿಯಾಗಲಿದ್ದಾರೆ ಎಂದರು.
ಅರ್ಜುನ್ ಜನ್ಯ ಅವರ ಮ್ಯೂಸಿಕ್ ಕೂಡ ಚಿತ್ರಕ್ಕಿರಲಿದೆ. ಶೀಘ್ರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.





