ಅಲ್ಲು ಅರ್ಜುನ್ ಅವರ ‘ಪುಷ’ ಸಿನಿಮಾ ಟಾಲಿವುಡ್ ನಲ್ಲಿ ಭರ್ಜರಿ ಹಿಟ್ ಆಗಿತ್ತು. ಪುಷ್ಪರಾಜ್ ಆ್ಯಕ್ಷನ್ ಅವತಾರ ಸಿನಿಮಾ ಮಂದಿಗೆ, ಮಾಸ್ ಪ್ರಿಯರಿಗೆ ಕಿಕ್ ಕೊಟ್ಟಿತ್ತು.
ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಎಲ್ಲಾ ಭಾಷೆಯಲ್ಲೂ ಸಿನಿಮಾ ದೊಡ್ಡ ಗಳಿಕೆ ಕಂಡಿತ್ತು. ಸಿನಿಮಾದ ಎರಡನೇ ಭಾಗ ಸಟ್ಟೇರಿದೆ. ಎರಡನೇ ಭಾಗದಲ್ಲಿ ಫೈಟ್, ಎಂಟರ್ ಟೈನರ್ ಎಲ್ಲವೂ ಡಬ್ಬಲ್ ಆಗಿರಲಿದೆ. ಸಿನಿಮಾದ ಬಜೆಟ್ ದೊಡ್ಡ ಹೈ ಆಗಿರಲಿದೆ.
ಸುಕುಮಾರನ್ ನಿರ್ದೇಶನದ ಸಿನಿಮಾದಲ್ಲಿ ಅಲ್ಲು, ರಶ್ಮಿಕಾ ,ಫಾಹದ್ ನಂತೆ ಗಮನ ಸೆಳೆದದ್ದು, ಮೈ ಚಳಿ ಬಿಟ್ಟು ಐಟಂ ಹಾಡಿನಲ್ಲಿ ಕುಣಿದ ಸಮಂತಾ. ಸಮಂತಾ ರುತ್ ಪ್ರಭು ‘ಹೂ ಅಂತಿಯಾ ಮಾವ.. ಊಹೂ ಅಂತಿಯಾ ಮಾವ..’ ಹಾಡು ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿರುವ ಹಾಡು, ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ.
ಈಗ ಪುಷ್ಪ ಸೀಕ್ವೆಲ್ ನಲ್ಲೂ ಸಮಂತಾ ಕುಣಿದ ಹಾಗಿನ ಐಟಂ ಸಾಂಗ್ ಇರಲಿದೆ ಎನ್ನಲಾಗುತ್ತಿದೆ. ಆದರೆ ಅಲ್ಲಿ ಸಮಂತಾ ಇರಲ್ಲ ಬೇರೆ ನಟಿ ಇರಲಿದ್ದಾರೆ ಎನ್ನುವ ಗುಸು ಗುಸು ಗಾಸಿಪ್ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.
ವರದಿಯ ಪ್ರಕಾರ ಕಾಜಲ್ ಅಗರ್ ವಾಲ್ ‘ಪುಷ್ಪ -2’ ನಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರ ತಂಡ ಅವರಿಗೆ ಆಫರ್ ನೀಡಿದೆ ಎನ್ನುವುದು ಅಭಿಮಾನಿಗಳ ಗಾಸಿಪ್. ಆದರೆ ಇದನ್ನು ಚಿತ್ರ ತಂಡವೇ ಅಧಿಕೃತವಾಗಿ ಇನ್ನೂ ಎಲ್ಲೂ ಹೇಳಿಲ್ಲ.
ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ -2 ಗಾಗಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

