ಅಪ್ಪು ಭೌತಿಕವಾಗಿ ನಮ್ಮೊಂದಿಗೆ ಅವರು ನಮ್ಮಿಂದ ದೂರವಾಗಿ ಒಂದು ವರ್ಷ ಕಳೆದಿದೆ. ಅವರ ನೆನಪು, ಅವರ ನಗುಮುಖದ ವ್ಯಕ್ತಿತ್ವದ ಮನದಲ್ಲಿ ಅಚ್ಚಾಗಿ ಉಳಿದಿದೆ.
ಅಪ್ಪು ನಿಧನ ಇಡೀ ಚಿತ್ರರಂಗಕ್ಕೆ ಬರ ಸಿಡಿಲು. ಪ್ರತಿಯೊಬ್ಬ ಕಲಾವಿದ ಅಪ್ಪು ಅಗಲಿಕೆಗೆ ದುಃಖ ಪಟ್ಟಿದ್ದಾರೆ. ಇತ್ತೀಚೆಗೆ ‘ಪುನೀತ ಪರ್ವ’ದಲ್ಲಿ ಸ್ಯಾಂಡಲ್ ವುಡ್ ,ಟಾಲಿವುಡ್ ,ಬಾಲಿವುಡ್ ಗಣ್ಯರು ಅಪ್ಪು ಬಗ್ಗೆ ಮಾತಾನಾಡಿದ್ದರು. ಅಪ್ಪು ಎಲ್ಲಾ ಚಿತ್ರರಂಗರೊಂದಿಗೆ ಆತ್ಮೀಯವಾಗಿ ಇರುತ್ತಿದ್ದರು.
ಜೂ. ಎನ್.ಟಿ.ಆರ್ ಅವರು ಅಪ್ಪು ನಿಧನಕ್ಕೆ ದುಃಖಿಸಿದ್ದರು. ಅಪ್ಪು ನಟನೆಯ ‘ಚಕ್ರವ್ಯೂಹ’ ಚಿತ್ರದ ‘ಗೆಳೆಯ ಗೆಳೆಯ’ ಹಾಡಿಗೆ ಜೂ.ಎನ್.ಟಿ.ಆರ್ ಧ್ವನಿಯಾಗಿದ್ದರು. ಅಪ್ಪು ಜೂ.ಎನ್.ಟಿ.ಆರ್ ಅವರ ಸ್ನೇಹ ಆಪ್ತವಾಗಿತ್ತು. ಸಿನಿಮಾ ಹಿನ್ನಲೆಯ ಜೂ. ಎನ್.ಟಿ.ಆರ್ ಅವರ ಕುಟುಂಬದಲ್ಲಿ ಸಿನಿ ಮಂದಿಗೆ ತುಂಬಾ ಗೌರವವಿದೆ. ಅವರ ನಿವಾಸದಲ್ಲಿ ಅಪ್ಪು ಅವರ ಫೋಟೋವನ್ನು ಇಟ್ಟಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಒಳ್ಳೆಯವರು ಯಾವತ್ತೂ ನಮ್ಮ ಮನದಲ್ಲಿ ಇರುತ್ತಾರೆ. ಅಪ್ಪು ಅವರ ಬಗೆಗಿನ ಜೂ.ಎನ್.ಟಿ.ಆರ್ ಅವರ ಸ್ನೇಹ,ಗೌರವ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ನವೆಂಬರ್ 1 ರಂದು ರಾಜ್ಯ ಸರ್ಕಾರ ‘ಕರ್ನಾಟಕ ರತ್ನ’ ನೀಡಲಿದೆ. ಈ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಜೂ.ಎನ್.ಟಿ.ಆರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

