ಅದ್ದೂರಿಯಾಗಿ ‘ಪುನೀತ ಪರ್ವ’ ಕಾರ್ಯಕ್ರಮ ಜರುಗಿದೆ. ಹತ್ತಾರು ಸ್ಟಾರ್ ಗಳು ನೃತ್ಯ, ಹಾಡುಗಳಿಂದ ಪವರ್ ಸ್ಟಾರ್ ಅಪ್ಪು ಅವರಿಗೆ ನುಡಿ ನಮನ ಸಲ್ಲಿಸಿದ್ದಾರೆ.
‘ಗಂಧದ ಗುಡಿ’ ಪ್ರೀ ರಿಲೀಸ್ ಇವೆಂಟ್ ನ ವೇದಿಕೆಯಲ್ಲಿ ಹಲವು ಸೆಲೆಬ್ರಿಟಿಗಳು ಮಾತಾನಾಡಿದ್ದಾರೆ.


ರಾಕಿಂಗ್ ಸ್ಟಾರ್ ಯಶ್ ಅವರು ಅಪ್ಪು ಅವರ ಬಗ್ಗೆ ಮಾತಾನಾಡುತ್ತಾ, ಈ ಸಿನಿಮಾವನ್ನು ಪ್ರತಿಯೊಬ್ಬರೂ ನೋಡಬೇಕು. ಈ ಸಿನಿಮಾ ಎಲ್ಲಾ ದಾಖಲೆಗಳನ್ನು ಮುರಿಯಬೇಕು. ಕೆಜಿಎಫ್ ಕೂಡ ಇರಬಾರದು. ಮನೆ ಮನೆಯಲ್ಲೂ ಪ್ರತಿಯೊಬ್ಬರು ಹೋಗಿ ನೋಡಬೇಕಾದ ಸಿನಿಮಾವಿದು. ಈ ಸಿನಿಮಾವನ್ನು ನೋಡಿ ಅಷ್ಟೊಳ್ಳೆ ಜೀವ ಸೆಲೆಬ್ರಿಟ್ ಮಾಡುವ. ನಾವೆಲ್ಲಾ ಇದೇ ಸಾಧನೆ ಅನ್ನಬೇಕಾದರೆ, ಇದು ಕಣ್ರೋ ಸಾಧನೆ ಅಂಥ ಹೇಳಿಕೊಟ್ಟು ಹೋಗಿದ್ದಾರೆ. ಅವರಿಗೆ ಒಳ್ಳೆದಾಗಲಿ ಎಂದರು. ಯಶ್ ಮಾತುಗಳನ್ನು ಕೇಳುವಾಗ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಗಣ್ಯರು ಹಾಗೂ ಅಭಿಮಾನಿಗಳ ಕಣ್ಣಲ್ಲಿ ಕಣ್ಣೀರು ಹರಿದು ಬಂತು.

