ಮುಂಬಯಿ: ಐಪಿಎಲ್ ನಂತೆ ಹೆಚ್ಚು ಜನಪ್ರಿಯಗಳಿಸಿದ ಲೀಗ್ ಎಂದರೆ ಅದು ಪ್ರೋ ಕಬಡ್ಡಿ. ಈ ಬಾರಿ ಪ್ಲೇಯರ್ ಹರಾಜು ಪ್ರಕ್ರಿಯೆ ಇತ್ತೀಚಿಗೆ ನಡೆಯಿತು. ಯಾವಾಗ ಪ್ರೊ ಕಬಡ್ಡಿ 9ನೇ ಸೀಸನ್ ಆರಂಭವಾಗುತ್ತದೆ ಎನ್ನುವ ಕುತೂಹಲದಲ್ಲಿ ಕಾಯುತ್ತಿದ್ದ ವೀಕ್ಷಕರಿಗೆ ಆಯೋಜಕರು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಶುಕ್ರವಾರ ವಿವೋ ಪ್ರೋ ಕಬಡ್ಡಿ 9ನೇ ಸೀಸನ್ ಯಾವಾಗ ಆರಂಭವಾಗುತ್ತದೆ ಹಾಗೂ ಎಲ್ಲೆಲ್ಲಿ ನಡೆಯುತ್ತದೆ ಎಲ್ಲಾ ಮಾಹಿತಿಯನ್ನು ರಿವೀಲ್ ಮಾಡಿದೆ.
ಈ ಬಾರಿ ಅಕ್ಟೋಬರ್ 7 ರಿಂದ ಲೀಗ್ ಆರಂಭವಾಗಲಿದೆ. ಬೆಂಗಳೂರು, ಪುಣೆ,ಹೈದರಾಬಾದ್ ಮೂರು ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ಆಯೋಜಕರು ಹೇಳಿದ್ದಾರೆ.
ಇನ್ನು ಈ ಬಾರಿಯ ವಿಶೇಷ ಹಾಗೂ ಖುಷಿಯ ವಿಚಾರವೆಂದರೆ ಅಭಿಮಾನಿಗಳು ಹಾಗೂ ವೀಕ್ಷಕರಿಗೆ ಪಂದ್ಯ ನೋಡಲು ಅವಕಾಶವಿದೆ. ಕಳೆದ ವರ್ಷ ಕೋವಿಡ್ ಮುನ್ನೆಚ್ಚರಿಕೆಯಿಂದ ವೀಕ್ಷಕರಿಗೆ ಅವಕಾಶವಿರಲಿಲ್ಲ.
ಪಂದ್ಯಾಕೂಟದ ವೇಳಾಪಟ್ಟಿ ಹಾಗೂ ಇತರ ಮಾಹಿತಿ ಶೀಘ್ರದಲ್ಲೇ ಬರಲಿದೆ ಎಂದು ಆಯೋಜಕರು ಹೇಳಿದ್ದಾರೆ.

