ಡಾಲಿ ಧನಂಜಯ ಅವರು ‘ಹೆಡ್ ಬುಷ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಅ.21 ರಂದು ಸಿನಿಮಾ ತೆರೆಗೆ ಬರಲಿದೆ. ಅದ್ದೂರಿ ಪ್ರೀ ರಿಲೀಸ್ ಇವೆಂಟ್ ಮಾಡಿ ಮುಗಿಸಿದೆ. ಅದೇ ವೇದಿಕೆಯಲ್ಲಿ ಡಾಲಿ ತಮ್ಮ ಮುಂದಿನ ಸಿನಿಮಾ ‘ಟಗರು ಪಲ್ಯ’ವನ್ನು ಘೋಷಿಸಿದ್ದಾರೆ.
ಡಾಲಿ ಧನಂಜಯ ಅವರ 26ನೇ ಚಿತ್ರ ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಚಿತ್ರೀಕರಣ ಅರಂಭವಾಗಿದೆ.
ತೆಲುಗು ನಟ ಸತ್ಯದೇವ್ ಅವರು ಡಾಲಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರಿಗೂ ಇದು 26ನೇ ಚಿತ್ರ ಎನ್ನುವುದು ವಿಶೇಷ.
ಈ ಹಿಂದೆ ‘ಪೆಂಗ್ವಿನ್’ ಚಿತ್ರವನ್ನು ನಿರ್ದೇಶನ ಮಾಡಿರುವ ಈಶ್ವರ್ ಕಾರ್ತಿಕ್ ಅವರು ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸಿನಿಮಾಕ್ಕೆ ನಟಿ ಆಯ್ಕೆ ಆಗಿದ್ದು, ತಮಿಳಿನಲ್ಲಿ ‘ಓಹ್ ಮನಪೆಣ್ಣೆ’, ‘ಬ್ಲಡ್ ಮನಿ’, ‘ತಿರುಚಿತ್ರಬಾಲಂ’ ಚಿತ್ರದಲ್ಲಿ ನಟಿಸಿರುವ ಪ್ರಿಯಾ ಭವಾನಿ ಈ ಸಿನಿಮಾದ ಶಂಕರ್ ಕನ್ನಡ ಹಾಗೂ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.
ಪ್ರಿಯಾ ಭವಾನಿ ಶಂಕರ್ ಈ ಸಿನಿಮಾದಲ್ಲಿ ಫ್ಯಾಶನ್ ಡಿಸೈನರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಓಲ್ಡ್ ಟೌನ್ ಪಿಕ್ಚರ್ಸ್ ಸಂಸ್ಥೆಯಡಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡಿದ್ದಾರೆ.

