HomeNewsಪ್ರಭಾಸ್ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಪ್ರಶಾಂತ್ ನೀಲ್! ಐನೂರು ಕೋಟಿ ಬಂಡವಾಳ ಹೂಡಲು ದಿಲ್...

ಪ್ರಭಾಸ್ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಪ್ರಶಾಂತ್ ನೀಲ್! ಐನೂರು ಕೋಟಿ ಬಂಡವಾಳ ಹೂಡಲು ದಿಲ್ ರಾಜು ರೆಡಿ!

ಕೆಜಿಎಫ್ ಎಂಬ ಕಾಲ್ಪನಿಕ ಸಿನಿಮಾ ಪ್ರಪಂಚವನ್ನೇ ಸಿದ್ದಪಡಿಸಿ, ರಾಕಿ ಭಾಯ್ ಎಂಬ ನಾಯಕನನ್ನು ನೀಡಿ, ಇಡೀ ಪ್ರಪಂಚವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ನಿರ್ದೇಶಕ ಪ್ರಶಾಂತ್ ನೀಲ್ ಅವರದ್ದು. ತಮ್ಮ ಸಿನಿಮಾಗಳಿಂದ ಈಗಾಗಲೇ ಸ್ಟಾರ್ ಆಗಿರುವ ಇವರು, ಮುಂದಿನ ಸಿನಿಮಾಗಳಿಗೆ ಸಿನಿಮಾ ಪ್ರೇಮಿಗಳು ಕಾಯುವಂತೆ ಮಾಡಿದ್ದಾರೆ. ಸದ್ಯ ಅವರ ಪ್ರಭಾಸ್ ಅವರ ಜೊತೆಗೇ, ಹೊಂಬಾಳೆ ಫಿಲಂಸ್ ನಿರ್ಮಾಣದ, ಬಹುನಿರೀಕ್ಷಿತ ‘ಸಲಾರ್’ ಸಿನಿಮಾ ಮಾಡುತ್ತಿರುವುದು ಗೊತ್ತಿರುವ ವಿಚಾರ. ಇದರ ಬಳಿಕ ತೆಲುಗಿನ ಖ್ಯಾತ ನಟ ಜೂನಿಯರ್ ಎನ್ಟಿಆರ್ ಅವರ ಮುಂದಿನ ಸಿನಿಮಾ ಕೂಡ ಮಾಡುತ್ತಿದ್ದಾರೆ ಎಂಬ ಘೋಷಣೆಯಾಗಿದೆ. ಅದಾದ ನಂತರ? ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ತೆಲುಗಿನ ಪ್ರಖ್ಯಾತ ಹಾಗು ಯಶಸ್ವಿ ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾಗಿರುವ ದಿಲ್ ರಾಜು ಅವರು ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿದ್ದಾರೆ. ತಾತ್ಕಾಲಿಕಾವಾಗಿ ‘NTR31’ ಎಂದು ಕರೆಯಲ್ಪಡುತ್ತಿರುವ ಪ್ರಶಾಂತ್ ನೀಲ್ – ಎನ್ಟಿಆರ್ ಜೋಡಿಯ ಸಿನಿಮಾದ ನಂತರದ ಪ್ರಶಾಂತ್ ನೀಲ್ ಅವರ ಸಿನಿಮಾಗೆ ದಿಲ್ ರಾಜು ನಿರ್ಮಾಣ ಮಾಡಲಿದ್ದಾರಂತೆ. ಇದು ಕೂದ ಪ್ರಭಾಸ್ ಅವರ ಜೊತೆಗೇ. ಸದ್ಯಕ್ಕೆ ಸಿನಿಮಾದ ಕಥೆಗೆ ‘ರಾವಣನ್’ ಎಂದು ಹೆಸರಿಡಲಾಗಿದ್ದು, ಬದಲಾದರೂ ಆಗಬಹುದು. ‘ಸಲಾರ್’ ನಂತರ ‘NTR31’ ಅದರ ನಂತರ ಈ ‘ರಾವಣನ್’ ಸೆಟ್ಟೇರಲಿದೆ ಎಂದಿದ್ದಾರೆ. ಈ ವಿಚಾರ ಸಿನಿಪ್ರೇಮಿಗಳಿಗೆ ಸಂತಸ ತಂದಿದೆ.

ಈ ಹಿಂದೆ ದಿಲ್ ರಾಜು ಅವರು ರಾಕಿಂಗ್ ಸ್ಟಾರ್ ಯಶ್ ಅವರ 20ನೇ ಸಿನಿಮಾ,’YASH20’ಯನ್ನ ತಾವೇ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕಥೆ, ನಿರ್ದೇಶಕರು ಈ ಯಾವುದರ ಬಗ್ಗೆಯೂ ಏನು ಬಿಚ್ಚಿಡದ ಇವರು ಕೇವಲ ನಿರ್ಮಾಣ ನನ್ನದು ಎಂದಿದ್ದರು. ಅಲ್ಲದೇ ಯಶ್ ಅವರು ತಮ್ಮ 19ನೇ ಸಿನಿಮಾವನ್ನ ಇನ್ನೂ ಘೋಷಣೆ ಮಾಡದೇ ಇರುವುದರ ಕಾರಣ 20ನೇ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ ಎನ್ನಲಾಗುತ್ತಿದೆ. ಇದೀಗ ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾವನ್ನು ಕೂಡ ಮಾಡುತ್ತಿರುವುದಾಗಿ ಹೇಳಿ, ಕನ್ನಡಿಗರಿಗೆ ಸಂತಸ ನೀಡಿದ್ದಾರೆ. ಸದ್ಯದಲ್ಲೇ ‘Yash19’ ಕೂಡ ಘೋಷಣೆಯಾಗಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಈ ಎಲ್ಲಾ ಸಿನಿಮಾಗಳ ಬಗ್ಗೆ ಏನೇನು ಆಗುತ್ತದೆ ಎಂಬುದನ್ನ ಕಾದು ನೋಡಬೇಕಿದೆಯಷ್ಟೇ.

RELATED ARTICLES

Most Popular

Share via
Copy link
Powered by Social Snap