ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಪ್ರಭಾಸ್ ಅವರ ‘ಸಲಾರ್’ ಮೇಲೆ ದೊಡ್ಡ ನಿರೀಕ್ಷೆಯಿದೆ. ಇದೇ ವರ್ಷ ಸಿನಿಮಾ ತೆರೆಗೆ ಬರಲಿದೆ.
ಸೆಲೆಬ್ರಿಟಿಗಳ ಆಗುಹೋಗುಗಳತ್ತ ನೋಟವಿಡಲು ಜನ ಅವರ ಸೋಶಿಯಲ್ ಮೀಡಿಯಾ ಖಾತೆಯನ್ನು ಫಾಲೋ ಮಾಡುತ್ತಾರೆ. ತಮ್ಮ ಮೆಚ್ಚಿನ ಸ್ಟಾರ್ಸ್ ಗಳು ಯಾವ ಪೋಸ್ಟ್ ಹಾಕುತ್ತಾರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೆಟ್ಟಿಗರು ನೀಡಿ ಕೆಲವೊಮ್ಮೆ ಕಾಮೆಂಟ್ ಮೂಲಕ ರಿಪ್ಲೈ ಮಾಡುವುದಿದೆ.
ಕೆಜಿಎಫ್ ಬಳಿಕ ಟಾಲಿವುಡಗೆ ಹೋದ ಪ್ರಶಾಂತ್ ನೀಲ್ ಅವರನ್ನು ಕೆಲವರು ಈ ಹಿಂದೆ ಟೀಕಿಸಿದ್ದರು. ಇದಾದ ಬಳಿಕ ಇತ್ತೀಚೆಗೆ ಕೆಜಿಎಫ್ ಸಿನಿಮಾದಲ್ಲಿ ಬರುವ ಉರ್ದು ಡೈಲಾಗ್ ವೊಂದನ್ನು ಹಾಕಿ ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದರು.
ಇದು ಕೆಲ ನೆಟ್ಟಗರು ಗರಂ ಆಗುವಂತೆ ಮಾಡಿತ್ತು. ಕನ್ನಡದಲ್ಲಿ ವಿಶ್ ಮಾಡಿ ಎಂದು ಹೇಳಿದ್ದರು. ಈಗ ಪ್ರಶಾಂತ್ ನೀಲ್ ಟ್ವಿಟರ್ ಖಾತೆಯನ್ನು ಓಪನ್ ಮಾಡಿದರೆ ಅದು ಚಾಲ್ತಿಯಲ್ಲಿಲ್ಲ ಎಂದು ತೋರಿಸುತ್ತಿದೆ. ಫ್ಯಾನ್ಸ್ ಮಾಡಿದ ಟ್ವೀಟ್ ಗಳಿಂದ ಅವರೇ ಬೇಸರವಾಗಿ ಟ್ವಿಟರ್ ಖಾತೆಯನ್ನು ನಿಷ್ಕ್ರಿಯ ಮಾಡಿದರೆಯೇ ಅಥವಾ ಬೇರೆ ಏನಾದರೂ ಕಾರಣವಿರಬಹುದೆಂದು ಎನ್ನಲಾಗಿದೆ.
ಚಿತ್ರೀಕರಣ ಆಗುವ ವೇಳೆ ಯಾವುದೇ ತೊಂದರೆಯಾಗದಂತೆ ಏಕಾಗ್ರತೆ ಕಡೆ ಗಮನ ಹರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

