HomeNewsಜನಮನ ಗೆಲ್ಲುತ್ತಿದೆ 'ಪ್ರಣಯಂ' ಚಿತ್ರದ ಟೀಸರ್.

ಜನಮನ ಗೆಲ್ಲುತ್ತಿದೆ ‘ಪ್ರಣಯಂ’ ಚಿತ್ರದ ಟೀಸರ್.

ಹರೆಯದ ಹೃದಯಗಳಲ್ಲಿನ ಗೊಂದಲ ತೊಳಲಾಟಗಳನ್ನ ಅರಿತವರಾರು? ಅವುಗಳ ಕಾರಣವೇನು? ಅವುಗಳನ್ನ ಸರಿ ಮಾಡುವವರಾರು? ಈ ವಯಸ್ಸಿನ, ವಯಸ್ಸಿನವರ ಕಥೆಗಳಿರೋ ಅದೆಷ್ಟೇ ಸಿನಿಮಾಗಳು ಬಂದರು ಸಹ, ಈ ರೀತಿಯ ಸಿನಿಮಾಗಳಿಗೆ ಬೇಡಿಕೆ ಕಡಿಮೆಯಾಗುವುದಿಲ್ಲ. ಇಂತದ್ದೇ ಸಿನಿಮಾವೊಂದು ತನ್ನ ಟೀಸರ್ ನ ಮೂಲಕ ಎಲ್ಲೆಡೆ ಬಾರೀ ಸದ್ದು ಮಾಡುತ್ತಿದೆ. ಆ ಸಿನಿಮಾವೇ ‘ಪ್ರಣಯಂ’. ಸದ್ಯ ಚಿತ್ರದ ಟೀಸರ್ ಮಾತ್ರ ಬಿಡುಗಡೆಯಾಗಿದ್ದು, ಸಿನಿಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮುಗಿಸಿಕೊಂಡ ಜೋಡಿಗಳ ಬದುಕಿನ ಬಗ್ಗೆಯ ಕಥೆ ಹೊಂದಿರುವಂತಹ ಸಿನಿಮಾ ‘ಪ್ರಣಯಂ’.ಈ ಸಮಯದಲ್ಲಿ ಆ ಜೋಡಿಗಳನ್ನು ಕಾಡುವ ತೊಳಲಾಟ, ಪ್ರೇಮ, ವಿರಹ ಇದೆಲ್ಲದರ ಸುತ್ತ ಸುಳಿಯುವಂತಹ ಒಂದು ಪವರ್ ಫುಲ್ ಶೃಂಗಾರ ಕಾವ್ಯವೇ ಈ ‘ಪ್ರಣಯಂ’ ಸಿನಿಮಾ. ‘ಗಣಪ’, ‘ಕರಿಯ 2’ ರೀತಿಯ ಹಿಟ್ ಸಿನೆಮಾಗಳನ್ನು ನೀಡಿರುವಂತಹ ನಿರ್ಮಾಪಕರಾದ ಪರಮೇಶ ಅವರು ಈ ಚಿತ್ರಕ್ಕೆ ಕಥೆ ನೀಡಿ, ಬಂಡವಾಳ ಕೂಡ ಹೂಡಿದ್ದಾರೆ. ಎಸ್ ದತ್ತಾತ್ರೇಯ ಅವರ ಚಿತ್ರಕಥೆ ಹಾಗು ನಿರ್ದೇಶನವನ್ನ ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಇನ್ನು ಹೆಸರಾಂತ ಸಂಗೀತ ನಿರ್ದೇಶಕರಾದ ಮನೋಮೂರ್ತಿ ಅವರು ಚಿತ್ರಕ್ಕೆ ಸಂಗೀತ ನೀಡಿದ್ದು, ಟೀಸರ್ ನಲ್ಲಿ ಕೇಳಿಬಂದಿರುವ ಹಿನ್ನೆಲೆ ಸಂಗೀತ ಅದರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ. ಹಾಗೆಯೇ ನಾಯಕ ನಾಯಕಿಯಾಗಿ ನಟಿಸಿರುವ ರಾಜವರ್ಧನ್ ಹಾಗು ನೈನಾ ಗಂಗೂಲಿ ಅವರ ಜೋಡಿಯ ಕೆಮಿಸ್ಟ್ರಿ ಕೂಡ ಅದ್ಭುತವಾಗಿ ಮೂಡಿಬಂದಿದ್ದು, ಟೀಸರ್ ನ ತುಂಬಾ ಇವರನ್ನೇ ಕಾಣುವಂತೆ ಮಾಡಿದ್ದಾರೆ.

ಪರಮೇಶ ಅವರ ‘ಮಾನಸಿ ವೆಂಚರ್ಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ರಾಜವರ್ಧನ್ ಹಾಗು ನೈನಾ ಗಂಗೂಲಿ ಅವರ ಜೊತೆಗೆ, ರಾಘವ್ ನಾಯಕ್, ಗೋವಿಂದೆ ಗೌಡ, ಮಂಥನ ಸೇರಿದಂತೆ ಇನ್ನು ಹಲವರು ಚಿತ್ರದ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ, ಕೆ ಗಿರೀಶ್ ಕುಮಾರ್ ಅವರ ಸಂಕಲನ ಜೊತೆಗೆ ನಿರ್ದೇಶಕರಾದ ಎಸ್ ದತ್ತಾತ್ರೇಯ ಮತ್ತು ಶರತ್ ಚಕ್ರವರ್ತಿ ಅವರ ಸಂಭಾಷಣೆ ಚಿತ್ರದಲ್ಲಿರಲಿದೆ. ಹಿನ್ನೆಲೆ ಸಂಗೀತ, ನಾಯಕ ನಾಯಕಿಯ ಅದ್ಭುತ ಕೆಮಿಸ್ಟ್ರಿ ಹಾಗು ಕಂಗಳನ್ನು ಮುದಗೊಳಿಸುವ ದೃಶ್ಯಗಳಿಂದ ಎಲ್ಲೆಡೆ ಪ್ರಶಂಸೆ ಪಡೆಯುತ್ತಿರುವ ‘ಪ್ರಣಯಂ’ ಚಿತ್ರದ ಟೀಸರ್ ಅನ್ನು ಸದ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೋಡುತ್ತಿದ್ದಾರೆ.

RELATED ARTICLES

Most Popular

Share via
Copy link
Powered by Social Snap