ಡೈನಾಮಿಕ್ ಪ್ರಜ್ವಲ್ ದೇವರಾಜ್ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ನಟ. ‘ಸಿಕ್ಸರ್’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಜ್ವಲ್ ತನ್ನ ಚೊಚ್ಚಲ ಸಿನಿಮಾದಲ್ಲೇ ನಟನೆಗಾಗಿ ಸುವರ್ಣ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟನಿಗಾಗಿ ಪ್ರಶಸ್ತಿ ಸ್ವೀಕರಿಸಿದವರು. ಇದಾದ ಬಳಿಕ ಹರ್ಷ ನಿರ್ದೇಶನದ ‘ಗೆಳೆಯಾ’ ಸಿನಿಮಾ ಸ್ಯಾಂಡಲ್‌ವುಡ್ ಖ್ಯಾತಿಗಳಿಸಿತು.
ಮಹೇಶ್ ಬಾಬು ನಿರ್ದೇಶನ ಮಾಡಿರುವ ‘ಮೆರವಣಿಗೆ’ ಸಿನಿಮಾ ಪ್ರಜ್ವಲ್ ದೇವರಾಜ್ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಯಿತು. ಕಾಮಿಡಿ ಹಾಗೂ ಪ್ರೇಮ ಕಥೆವುಳ್ಳ ಸಿನಿಮಾವನ್ನು ಪ್ರೇಕ್ಷಕರು ಅಪಾರ ಮೆಚ್ಚಿಕೊಂಡಿದ್ದರು. ‘ಗುಲಾಮ’, ‘ಮುರಳಿ ಮೀಟ್ಸ್ ಮೀರಾ’ , ‘ಸೂಪರ್ ಶಾಸ್ತ್ರಿ’, ‘ಗಲಾಟೆ’ ,ಗಂಗೆ ಬಾರೆ ತುಂಗೆ ಬಾರೆ,’ , ‘ಜೀವಾ’, ‘ಕೆಂಚ’, ಭದ್ರ..ಹೀಗೆ ಹಲವಾರು ಚಿತ್ರಗಳು ಒಂದಷ್ಟು ಸದ್ದು ಮಾಡಿ ಡೈನಾಮಿಕ್ ಪ್ರಿನ್ಸ್ ಅವರನ್ನು ಇನ್ನಷ್ಟು ಹತ್ತಿರವಾಗಿಸಿತು.
ಇತ್ತೀಚಿನ ವರ್ಷದಲ್ಲಿ ಬಂದ ‘ಚೌಕ’ ‘ಜಂಟಲ್ ಮ್ಯಾನ್’, ‘ಇನ್ಸ್ ಪೆಕ್ಟರ್ ವಿಕ್ರಮ್’, ‘ಅರ್ಜುನ್ ಗೌಡ’, ಸಿನಿಮಾಗಳು ಸದ್ದು ಮಾಡಿ ಮಾಸ್ ಆಡಿಯನ್ಸ್ ಗಳ ಗಮನ ಸೆಳೆದಿತ್ತು.
ಪ್ರಜ್ವಲ್ ದೇವರಾಜ್ ಅವರಿಗೆ ದೊಡ್ಡ ಫ್ಯಾನ್ ಫಾಲೋವರ್ಸ್ ಗಳಿದ್ದಾರೆ.ಅವರ ಹೆಸರಿನಲ್ಲಿ ಸಮಾಜ ಸೇವೆ, ಕ್ರೀಡೆ ಹೀಗೆ ನಾನಾ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ. ಎಲ್ಲರೊಂದಿಗೆ ಸರಳವಾಗಿ ಬೆರೆಯುವ ಪ್ರಜ್ವಲ್ ದೇವರಾಜ್ ಅವರು ಚಿತ್ರ ರಂಗಕ್ಕೆ ಬಂದು 16 ವರ್ಷಗಳು ಕಳೆದಿದೆ.

