HomeNews'ಕಾಂತಾರ' ಮೆಚ್ಚಿದ ಟಾಲಿವುಡ್ ಸ್ಟಾರ್ ಪ್ರಭಾಸ್

‘ಕಾಂತಾರ’ ಮೆಚ್ಚಿದ ಟಾಲಿವುಡ್ ಸ್ಟಾರ್ ಪ್ರಭಾಸ್

ಕರಾವಳಿ ಆಚರಣೆ ಹಾಗೂ ಕಾಡಿನ‌ ನಡುವಿನ ಸಂಘರ್ಷವನ್ನು ತೋರಿಸಿರುವ ರಿಷಭ್ ಶೆಟ್ಟಿ ಅವರ ‘ಕಾಂತಾರ’ ಕ್ಕೆ ರಾಜ್ಯಾದ್ಯಂತ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


ಸಿನಿ ರಸಿಕರು ರಿಷಭ್ ಶೆಟ್ಟಿ ಅವರ ಅಭಿನಯಕ್ಕೆ ಚಪ್ಪಾಳೆ ತಟ್ಟಿ ಭೇಷ್ ಎಂದಿದ್ದಾರೆ. ಸೆಲೆಬ್ರಿಟಿಗಳು, ಕಲಾವಿದರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


ದೊಡ್ಮನೆಯವರು, ರಕ್ಷಿತ್ ಶೆಟ್ಟಿ ಹೀಗೆ.. ಹತ್ತಾರು ಮಂದಿ ರಿಷಭ್ ಅವರ ಹೊಸ ಬಗೆಯ ಪ್ರಯೋಗಕ್ಕೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.


ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ’ ತುಳುನಾಡಿನ ದೈವ, ಭೂತ ಕೋಲ ಆಚರಣೆಯ ಸುತ್ತ ಸಾಗುವ ಚಿತ್ರ. ಬಿಜಿಎಂ ಹಾಗೂ ಮೇಕಿಂಗ್ ,‌ಕ್ಲೈಮ್ಯಾಕ್ಸ್ ನಿಂದ ಸಿನಿಮಾ ಹೆಚ್ಚು ಮಂದಿಗೆ ಇಷ್ಟವಾಗುತ್ತದೆ.


ಟಾಲಿವುಡ್ ಸ್ಟಾರ್ ಪ್ರಭಾಸ್ ಅವರು ಕಾಂತಾರ ಸಿನಿಮಾವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ‌ಮೀಡಿಯಾದ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.




ಕಾಂತಾರ ಚಿತ್ರವನ್ನು ನೋಡಿ ಎಂಜಾಯ್ ಮಾಡಿದೆ, ಅದರಲ್ಲಿಯೂ ಕ್ಲೈಮ್ಯಾಕ್ಸ್ ಬಹಳ ಇಷ್ಟವಾಯಿತು ಎಂದು ಪ್ರಭಾಸ್ ಬರೆದುಕೊಂಡು, ಚಿತ್ರ ತಂಡಕ್ಕೆ ಶುಭಕೋರಿದ್ದಾರೆ.


ಪ್ರಭಾಸ್ ಹೊಂಬಾಳೆ ಫಿಲ್ಮ್ಸ್ ಅವರ ‘ಸಲಾರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

RELATED ARTICLES

Most Popular

Share via
Copy link
Powered by Social Snap