ಈ ವರ್ಷದ ಬಹು ನಿರೀಕ್ಷಿತ ಖ್ಯಾತ ನಿರ್ದೇಶಕ ಮಣಿರತ್ನಂ ಅವರ
‘ಪೊನ್ನಿಯಿನ್ ಸೆಲ್ವನ್’ ಚಿತ್ರದ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಬಿಗ್ ಬಜೆಟ್ ಸಿನಿಮಾಗಳಲ್ಲಿ ಘಟಾನಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಕಲ್ಕಿ ಕೃಷ್ಣಮೂರ್ತಿ ಬರೆದ ‘ಪೊನ್ನಿಯಿನ್ ಸೆಲ್ವನ್’ ಕೃತಿಯನ್ನು ಆಧರಿಸಿ ಚಿತ್ರ ತಯಾರಾಗಿದೆ. ಭರ್ಜರಿ ಪ್ರಚಾರದಲ್ಲಿ ನಿರತವಗಿರುವ ಚಿತ್ರ ತಂಡ ಈಗ ಟ್ರೇಲರ್ ರಿಲೀಸ್ ಮಾಡಿ, ಎಲ್ಲರ ಚಿತ್ತವನ್ನು ಸೆಳೆದಿದೆ.
ಈ ಹಿಂದೆ ಸಿನಿಮಾದ ‘ಪೊನ್ನಿ ನದಿ..’ ಸಖತ್ ಸೌಂಡ್ ಮಾಡಿತ್ತು. ಈಗ ಟ್ರೇಲರ್ ನಲ್ಲಿ ಚೋಳ ಸಾಮ್ರಾಜ್ಯದ ಕಥೆಯ ಎಳೆಯನ್ನು ಅಮೋಘವಾಗಿ ಹೇಳಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ವಿಕ್ರಮ್, ತ್ರಿಷಾ, ಜಯಂ ರವಿ, ಕಾರ್ತಿ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದು ಎಲ್ಲರ ಪಾತ್ರಗಳ ಝಲಕ್ ನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ಎರಡು ಭಾಗದಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಮೊದಲ ಭಾಗದ ಟ್ರೇಲರ್ ರಿಲೀಸ್ ಅಗಿದೆ. ದುಬಾರಿ ಸೆಟ್, ಮೇಕಿಂಗ್, ಸಾಹಸ ದೃಶ್ಯದಿಂದ ಟ್ರೇಲರ್ ಗಮನ ಸೆಳೆಯುತ್ತದೆ.
ಚಿತ್ರಕ್ಕೆ ಲೆಜೆಂಡ್ ಎ.ಆರ್. ರಹಮಾನ್ ಸಂಗೀತ ನೀಡಿದ್ದು, ಪ್ಯಾನ್ ಇಂಡಿಯಾ ಚಿತ್ರ ಇದೆ. ಸೆ. 30 ರಂದು ತೆರೆಗೆ ಬರಲಿದೆ.

