ಈ ವಾರ ಚಂದನದವನದಲ್ಲಿ ನಾಲ್ಕು ಸಿನಿಮಾಗಳು ರಿಲೀಸ್ ಆಗಿದೆ. ಅವುಗಳಲ್ಲಿ ಒಂದು ಸದಾ ಚೇಷ್ಠೆಗಳನ್ನು ಮಾಡುತ್ತಾ ಸಮಾಜಕ್ಕೆ ಗಂಭೀರ ಸಂದೇಶವನ್ನು ನೀಡುವ ವಿಜಯ್ ಪ್ರಸಾದ್ ನಿರ್ದೇಶನದ ‘ಪೆಟ್ರೋಮ್ಯಾಕ್ಸ್’
ಅನಾಥ ಆಶ್ರಮದಿಂದ – ಆನಂದ ಹುಡುಕಲು ಸಾಗುವ ನಾಲ್ವರ ಕಥೆ:


ನಾಲ್ವರು ವಿಭಿನ್ನ ಹೆಸರುಗಳ್ಳುಳ ಅನಾಥರ ಕಥೆಯಿದು. ಈ ನಾಲ್ವರು ಹೇಗೆಂದರೆ ಇದದ್ದನ್ನು ಇದ್ದ ಹಾಗೆ ಹೇಳಿ ಬಿಡುವ ಗುಣವುಳ್ಳವರು. ಇವರ ಮಾತುಗಳು ಕೆಲವೊಮ್ಮೆ ಕಚಗುಳಿ ಇಟ್ಟರೆ, ಕೆಲವೊಮ್ಮೆ ಮುಜುಗರವೂ ಉಂಟು ಮಾಡುತ್ತದೆ. ಎಲ್ಲರೂ ಒಂದೆ ಕಡೆ ಇರಲು ಒಂದು ಬಾಡಿಗೆ ಮನೆಯನ್ನು ಹುಡುಕುವ ಜಾಡೇ ಚಿತ್ರದ ಕಥೆ.
ಸಿನಿಮಾದಲ್ಲಿ ಬರುವ ಸಂಭಾಷಣೆಗಳ ಅರ್ಥ, ಒಳಾರ್ಥಗಳು ಚೇಷ್ಟೆಯಾಗಿ ಪ್ರೇಕ್ಷಕರನ್ನು ನಗು ತರಿಸಿದರೂ, ಕೆಲವೊಮ್ಮೆ ತುಸು ಹೆಚ್ಚೇ ಅನ್ನಿಸಬಹುದು. ಆದರೆ ಚಿತ್ರದ ಕಥೆಗೆ ಅದು ಮುಖ್ಯವಾಗಿ ಸಾಗುತ್ತದೆ.


ಸತೀಶ್ ನೀನಾಸಂ, ಅರುಣ್ , ನಾಗಭೂಷಣ್ ,ಕಾರುಣ್ಯಾ ರಾಮ್ ನಾಲ್ವರು ಪರದೆ ಮೇಲೆ ಮೋಡಿ ಮಾಡುತ್ತಾರೆ. ಚಿತ್ರ ಮುಗಿದ ಮೇಲೆ ನೆನಪಾಗುತ್ತಾರೆ.
‘ನೀರ್ ದೋಸೆ’ಯಲ್ಲಿರುವಂತೆ ಇಲ್ಲಿಯೂ ಪಾತ್ರಧಾರಿಗಳ ತಮ್ಮ ಬದುಕಿನ ಕಥೆಯನ್ನು ಹೇಳವುದು ವಿಶೇಷ. ಸೆಕೆಂಡ್ ಹಾಫ್ ನಲ್ಲಿ ಚಿತ್ರ ಸುಧಾಮೂರ್ತಿ ಪಾತ್ರದ ಮೇಲೆ ಬೆಳಕು ಚೆಲ್ಲುತ್ತದೆ.
ಅಂತಿಮವಾಗಿ ಸಮಾಜಕ್ಕೊಂದು ಸಂದೇಶ ಕೊಟ್ಟು ಚಿತ್ರ ಮುಗಿಯುತ್ತದೆ.

