HomeExclusive Newsಆಸ್ಕರ್ ಜ್ಯೂರಿ ಕಮಿಟಿಯಲ್ಲಿ ನಿರ್ದೇಶಕ ಪವನ್ ಒಡೆಯರ್: ಸಂತಸವನ್ನು ಹಂಚಿಕೊಂಡ್ರು ನಿರ್ಮಾಪಕರು

ಆಸ್ಕರ್ ಜ್ಯೂರಿ ಕಮಿಟಿಯಲ್ಲಿ ನಿರ್ದೇಶಕ ಪವನ್ ಒಡೆಯರ್: ಸಂತಸವನ್ನು ಹಂಚಿಕೊಂಡ್ರು ನಿರ್ಮಾಪಕರು

ಕನ್ನಡದ ಖ್ಯಾತ ನಿರ್ದೇಶಕ, ನಿರ್ಮಾಪಕ ಪವನ್ ಒಡೆಯರ್ ಅವರ ‘ಡೊಳ್ಳು’ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು, ಥಿಯೇಟರ್ ನಲ್ಲೂ ಜನಮನ ಸೆಳೆದಿದೆ.

ಗೊಂವಿದಾಯ ನಮಃ,ಗೂಗ್ಲಿ,ರಣವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್
ನಟಸಾರ್ವಭೌಮ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಹತ್ತಿರವಾಗಿರುವ ಪವನ್ ಒಡೆಯರ್ ಅವರು ಸದ್ಯ “ರೇಮೊ” ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ತಮ್ಮ ಪ್ರೊಡಕ್ಷನ್ ಮೂಲಕ ಮೊದಲ ಬಾರಿಗೆ ‘ಡೊಳ್ಳು’ ನಿರ್ಮಿಸಿದ ಬಳಿಕ ಅವರೊಂದು ದೊಡ್ಡ ಅವಕಾಶವನ್ನು ಪಡೆದುಕೊಂಡಿರುವ ಬಗ್ಗೆ ಸ್ವತಃ ಪವನ್ ಅವರೇ ಹೇಳಿಕೊಂಡಿದ್ದಾರೆ.

ಪ್ರತಿಷ್ಠಿತ ಆಸ್ಕರ್ ಗೆ ಭಾರತದಿಂದ ‘ಚೆಲೋ ಶೋ’ ಸಿನಿಮಾ ಆಯ್ಕೆಯಾಗಿದೆ. ಇದರ ಆಯ್ಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ.

ಆಸ್ಕರ್ ಜ್ಯೂರಿ ತಂಡದ ಸದಸ್ಯರಾಗಿ ಕನ್ನಡದ ಪವನ್ ಒಡೆಯರ್ ಅವರು ಕೂಡ ಭಾಗಿಯಾಗಿದ್ದರು. ಇದನ್ನು ಸ್ವತಃ ಪವನ್ ಅವರೇ ಟ್ವೀಟ್ ಮಾಡಿ ಹೇಳಿದ್ದಾರೆ.

“ಆಸ್ಕರ್ ಕಮಿಟಿಯಿಂದ ನನಗೆ ಕರೆ ಬರುತ್ತದೆ ಎಂದು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆರಂಭದಲ್ಲಿ ನನಗೆ ನಂಬಲೂ ಸಾಧ್ಯವಾಗಿರಲಿಲ್ಲ. ನನ್ನ ಸಿನಿಮಾ ಕೆಲಸಗಳನ್ನು ಗುರುತಿಸಿ ಜ್ಯೂರಿ ತಂಡದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದು ಬಹಳ ಖುಷಿ ನೀಡಿದೆ. ನನ್ನ ನಿರ್ಮಾಣದ ‘ಡೊಳ್ಳು’ ಸಿನಿಮಾ ಇಂತಹದ್ದೊಂದು ಪ್ರತಿಷ್ಠಿತ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದು ಭಾವಿಸಿದ್ದೇನೆ. ಇದು ನನಗೆ ಬಹಳ ದೊಡ್ಡ ಗೌರವ ಎಂದೇ ಭಾವಿಸಿದ್ದೇನೆ. 17 ಜನರ ತಂಡದಲ್ಲಿ ಕನ್ನಡ ಚಿತ್ರರಂಗದಿಂದ ನಾನೂ ಒಬ್ಬ ಜ್ಯೂರಿಯಾಗಿ ಭಾಗವಹಿಸಿದ್ದು ಬಹಳ ಸಂತಸ ತಂದಿದೆ” ಎಂದು ಹೇಳಿದ್ದಾರೆ.

ಆಸ್ಕರ್ ಸೆಲೆಕ್ಷನ್‌ಗೆ ಹಿಂದಿ, ಬೆಂಗಾಲಿ, ತೆಲುಗು, ತಮಿಳು, ಗುಜರಾತಿ, ಮಲಯಾಳಂ ಭಾಷೆಗಳಿಂದ ಸಿನಿಮಾಗಳು ಬಂದಿದ್ದವು. ಆದರೆ ನಮ್ಮ ಭಾಷೆಯಿಂದ ಒಂದೇ ಒಂದು ಸಿನಿಮಾ ಆಯ್ಕೆಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ನಮ್ಮ ಸಿನಿಮಾಗಳು ಆಸ್ಕರ್‌ಗೆ ಬರುತ್ತವೆ” ಎಂದು ಭರವಸೆ ಪವನ್ ಒಡೆಯರ್ ಭರವಸೆ ನೀಡಿದ್ದಾರೆ.

ನಾನು ನೋಡಿದ 13 ಸಿನಿಮಾಗಳು ಉತ್ತಮವಾಗಿದ್ದವು. ಅದರಲ್ಲಿ ಚೆಲೋ ಶೋ ಬಹಳಷ್ಟು ಭಾವನೆಗಳನ್ನು ಹೊಂದಿದ್ದು, ಇವುಗಳಲ್ಲಿ ಇದೇ ಎದ್ದು ಕಾಣುತ್ತದೆ ಎಂದು ಹೇಳಿದರು.

RELATED ARTICLES

Most Popular

Share via
Copy link
Powered by Social Snap