ಡಾ.ಗಿರಿಧರ್ ಹೆಚ್ ಟಿ ನಿರ್ದೇಶನದ ‘ಪರಿಮಳ ಡಿಸೋಜಾ’ ಚಿತ್ರದ ಮೋಷನ್ ಪಿಕ್ಚರನ್ನು ಸಾಹಿತಿ ಕೆ.ಕಲ್ಯಾಣ್ ಹಾಗೂ ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ ಸಚಿವರಾದ ಮುನಿರತ್ನ ಅವರು ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭಕೋರಿದರು.
ಈ ಹಿಂದೆ ಮಾಜಿ ಸಿಎಂಗಳಾದ ಹೆಚ್. ಡಿ.ಕುಮಾರ ಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರು ಸಿನಿಮಾದ ಪೋಸ್ಟರನ್ನು ರಿಲೀಸ್ ಮಾಡಿ ಶುಭಕೋರಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಆಕ್ಸನ್ ಪ್ಯಾಮಿಲಿ ಸೆಂಟಿಮೆಂಟ್ ಕಥಾವಸ್ತುವನ್ನು ಹೊಂದಿರುವ ಬಹು ನಿರೀಕ್ಷಿತ ‘ಪರಿಮಳ ಡಿಸೋಜಾ’ ಚಿತ್ರದಲ್ಲಿ ಶ್ರೀನಿವಾಸ್ ಪ್ರಭು, ಭವ್ಯ, ಕೋಮಲ ಬನವಾಸೆ , ವಿನೋದ್ ಶೇಷಾದ್ರಿ , ಪೂಜ ರಾಮಚಂದ್ರ, ರೋಹಿಣಿ ಜಗನಾಥ್, ಚಂದನ ಶ್ರೀನಿವಾಸ್, ಮೀಸೆ ಆಂಜನಪ್ಪ, ಶಿವಕುಮಾರ್ ಆರಾಧ್ಯ, ನಾಗಮಂಗಲ ಜಯರಾಮ್ ಸುನೀಲ್ ಮೋಹಿತೆ, ಉಗ್ರಂ ರೆಡ್ಡಿ. ಲಕ್ಷ್ಮಣ್ ಗೌಡ, ಮುಂತಾದ ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕೆ. ರಾಮ್ ಅವರ ಛಾಯಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಕ್ರಿಸ್ಟೋಫರ್ ಜೇಸನ್ ಅವರ ಸಂಗೀತ ಇರಲಿದೆ. ವಿನೋದ್ ಶೇಷಾದ್ರಿ ಅವರು ವಿಲೇಜ್ ರೋಡ್ ಫಿಲಂಸ್ ಲಾಂಚನದಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.

