HomeExclusive News"ಏಕಾಕ್ಷರ ಫಿಲ್ಮ್' ಬ್ಯಾನರ್ ಏಕಾಕ್ಷರ ಟೈಟಲ್!" ಓ" ವಿನೂತನ ಹಾರರ್ ಸಿನಿಮಾ ಅತೀ ಶೀಘ್ರದಲ್ಲಿ

“ಏಕಾಕ್ಷರ ಫಿಲ್ಮ್’ ಬ್ಯಾನರ್ ಏಕಾಕ್ಷರ ಟೈಟಲ್!
” ಓ” ವಿನೂತನ ಹಾರರ್ ಸಿನಿಮಾ ಅತೀ ಶೀಘ್ರದಲ್ಲಿ

‘ಏಕಾಕ್ಷರ ಫಿಲ್ಮ್’ ಬ್ಯಾನರ್ ಅಡಿಯಲ್ಲಿ ಕುತೂಹಲಕಾರಿ ‘ಓ’ ಹಾರರ್ ಸಿನಿಮಾವೊಂದು ಕನ್ನಡ ಸಿನಿ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಮಹೇಶ್ ಸಿ. ಅಮ್ಮಲ್ಲಿ ದೊಡ್ಡಿಯವರ ವಾಮಾಚಾರದ ವಸ್ತುವಿಷಯವುಳ್ಳ ಚಿತ್ರಕಥೆ ಇದಾಗಿದ್ದು, ಕನ್ನಡದ ಉದಯೋನ್ಮುಖ ನಾಯಕಿ ನಟಿಯರಾದ ಮಿಲನಾ ನಾಗರಾಜ್ ಹಾಗೂ ಅಮೃತ ಅಯ್ಯಂಗಾರ್ ನಟಿಸಿರುವ ಈ ಚಿತ್ರದ ಟ್ರೇಲರ್ ವಿಜಯದಶಮಿಯಂದು ಬಿಡುಗಡೆಯಾಗಿದೆ.

ನಿರ್ಮಾಪಕ ಕಿರಣ್ ತಲಕಾಡು ಅವರ ಕಥೆಯಲ್ಲಿ, ಒಂದೇ ಕುಟುಂಬದ ಇಬ್ಬರು ಅಕ್ಕ-ತಂಗಿಯರ ನಡುವೆ ನಡೆಯುವ ಪ್ರೇಮ ಕಥಾಹಂದರವನ್ನು ಹೆಣೆದು ಬ್ಯಾನರ್ ನಲ್ಲೇ ಇರುವಂತೆ ಏಕಾಕ್ಷರ ಸಿನಿಮಾ ಕನಸೊತ್ತಿದ್ದ ಕಿರಣ್ ಅವರು ಈ ಚಿತ್ರಕ್ಕೆ ವಿಭಿನ್ನವಾದ ಏಕಾಕ್ಷರವನ್ನೇ ಇಟ್ಟಿರುವುದೂ ಒಂದು ವಿಶೇಷ.

ನಿರ್ದೇಶಕರು ಹೇಳುವಂತೆ, ಇಲ್ಲಿಯವರೆಗೆ ನೋಡಿರುವ ಹಾರರ್ ಸಿನಿಮಾಗಳಿಗಿಂತಲೂ ಈ ಚಿತ್ರ ವಿಭಿನ್ನವಾಗಿದ್ದು, ವಾಮಾಚಾರ ಮಾಡುವುದು ತಪ್ಪು ಎನ್ನುವ ಉತ್ತಮ ಸಂದೇಶವನ್ನೂ ಹೊತ್ತು ಬರುತ್ತಿದೆ.

ಸೆನ್ಸಾರ್ ಮಂಡಳಿಯವರಿಂದ ಪ್ರಶಂಸೆ ಪಡೆದಿರುವ ಈ ಚಿತ್ರದ ಫಸ್ಟ್ ಕಾಪಿ ಬಂದಿದ್ದು, ಮುಂದಿನ ತಿಂಗಳು ನವೆಂಬರ್ 11ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್
ರಾಜ್‌ಕುಮಾರ್ ಅವರೂ ಒಂದು ಹಾಡನ್ನು ಹಾಡಿದ್ದಾರೆ. ಆ ಹಾಡಿನ ಬಿಡುಗಡೆಯನ್ನು ದೊಡ್ಡ ಇವೆಂಟ್ ಮೂಲಕ ಮಾಡಬೇಕೆಂಬ ಯೋಚನೆ, ಯೋಜನೆ ಹಾಕಿಕೊಂಡಿದ್ದ ಚಿತ್ರ ತಂಡ, ಅಪ್ಪು ಅವರಿಲ್ಲದ ಈ‌ ಸಮಯದಲ್ಲಿ ಅವರನ್ನ‌ ಭಾವಪೂರ್ಣವಾಗಿ ಸ್ಮರಿಸಿಕೊಂಡಿದ್ದಾರೆ.

ವಿಜಯ ದಶಮಿ ಹಬ್ಬದ ಶುಭ ದಿನದಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದಕ್ಕೆ ನಾಯಕಿ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಸಂತೋಷ ವ್ಯಕ್ತಪಡಿಸಿದ್ದಾರೆ. ‌ವಿಭಿನ್ನ ರೀತಿಯ ಅನುಭವ ಕೊಡುವಂಥ ಈ ಥರದ ಚಿತ್ರಗಳನ್ನು ಮಾಡುವಾಗ ತುಂಬಾ ಸಹನೆ ಇರಬೇಕು, ಅದು ಈ ನಿರ್ದೇಶಕರಲ್ಲಿತ್ತು, ಹಾರರ್ ಎಫೆಕ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಜನರಿಗೆ ಹೆದರಿಸೋದು ತುಂಬಾ ಕಷ್ಟದ ಕೆಲಸ, ಕೆಲವು ಸೀನ್‌ಗಲ್ಲಿ ನಟಿಸುವಾಗ ತುಂಬಾ ಭಯವಾಗಿತ್ತು ಎಂದು ಚಿತ್ರೀಕರಣ ಸಮಯದಲ್ಲಾದ ಅನುಭವ ಹಂಚಿಕೊಂಡಿದ್ದಾರೆ

ದಿಲೀಪ್ ಚಕ್ರವರ್ತಿ ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತ, ಸತೀಶ್ ಬಾಬು ಅವರ ಹಿನ್ನೆಲೆ ಸಂಗೀತ, ಉಗ್ರಂ ಹಾಗೂ ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಅವರು ಸಂಕಲನಾಕಾರರಾಗಿ ಕೆಲಸ ಮಾಡಿದ್ದಾರೆ.

ಉಳಿದಂತೆ, ಹಿರಿಯ ನಟಿ ಸಂಗೀತಾ, ಸಿದ್ದು, ಮಾ. ಆಲಾಪ್ ಹಾಗೂ ಇನ್ನಿತರರ ಪ್ರಮುಖ ತಾರಾಬಗಳವಿರುವ ‘ಓ’ ಚಿತ್ರ ಕನ್ನಡ ಸಿನಿ‌ ಪ್ರೇಕ್ಷಕರ ಮನದಲ್ಲಿ 2022ರ ಸಾಲಿನ ಯಶಸ್ವೀ ಸಿನಿಮಾಗಳ ಪಟ್ಟಿ ಸೇರಿ, ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳಲಿದೆಯಾ ಕಾದು ನೋಡಬೇಕು!

ನಿರ್ದೇಶಕರು ಹೇಳುವಂತೆ, ಇಲ್ಲಿಯವರೆಗೆ ನೋಡಿರುವ ಹಾರರ್ ಸಿನಿಮಾಗಳಿಗಿಂತಲೂ ಈ ಚಿತ್ರ ವಿಭಿನ್ನವಾಗಿದ್ದು, ವಾಮಾಚಾರ ಮಾಡುವುದು ತಪ್ಪು ಎನ್ನುವ ಉತ್ತಮ ಸಂದೇಶವನ್ನೂ ಹೊತ್ತು ಬರುತ್ತಿದೆ.

ಸೆನ್ಸಾರ್ ಮಂಡಳಿಯವರಿಂದ ಪ್ರಶಂಸೆ ಪಡೆದಿರುವ ಈ ಚಿತ್ರದ ಫಸ್ಟ್ ಕಾಪಿ ಬಂದಿದ್ದು, ಮುಂದಿನ ತಿಂಗಳು ನವೆಂಬರ್ 11ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್
ರಾಜ್‌ಕುಮಾರ್ ಅವರೂ ಒಂದು ಹಾಡನ್ನು ಹಾಡಿದ್ದಾರೆ. ಆ ಹಾಡಿನ ಬಿಡುಗಡೆಯನ್ನು ದೊಡ್ಡ ಇವೆಂಟ್ ಮೂಲಕ ಮಾಡಬೇಕೆಂಬ ಯೋಚನೆ, ಯೋಜನೆ ಹಾಕಿಕೊಂಡಿದ್ದ ಚಿತ್ರ ತಂಡ, ಅಪ್ಪು ಅವರಿಲ್ಲ ಈ‌ ಸಮಯದಲ್ಲಿ ಅವರನ್ನ‌ ಭಾವಪೂರ್ಣವಾಗಿ ಸ್ಮರಿಸಿಕೊಂಡಿದ್ದಾರೆ.

ವಿಜಯ ದಶಮಿ ಹಬ್ಬದ ಶುಭ ದಿನದಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದಕ್ಕೆ ನಾಯಕಿ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಸಂತೋಷ ವ್ಯಕ್ತಪಡಿಸಿದ್ದಾರೆ. ‌ವಿಭಿನ್ನ ರೀತಿಯ ಅನುಭವ ಕೊಡುವಂಥ ಈ ಥರದ ಚಿತ್ರಗಳನ್ನು ಮಾಡುವಾಗ ತುಂಬಾ ಸಹನೆ ಇರಬೇಕು, ಅದು ಈ ನಿರ್ದೇಶಕರಲ್ಲಿತ್ತು, ಹಾರರ್ ಎಫೆಕ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಜನರಿಗೆ ಹೆದರಿಸೋದು ತುಂಬಾ ಕಷ್ಟದ ಕೆಲಸ, ಕೆಲವು ಸೀನ್‌ಗಲ್ಲಿ ನಟಿಸುವಾಗ ತುಂಬಾ ಭಯವಾಗಿತ್ತು ಎಂದು ಚಿತ್ರೀಕರಣ ಸಮಯದಲ್ಲಾದ ಅನುಭವ ಹಂಚಿಕೊಂಡಿದ್ದಾರೆ
. ಸಿದ್ದು ಕೂಡ ಒಂದೊಳ್ಳೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.

ದಿಲೀಪ್ ಚಕ್ರವರ್ತಿ ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತ, ಸತೀಶ್ ಬಾಬು ಅವರ ಹಿನ್ನೆಲೆ ಸಂಗೀತ, ಉಗ್ರಂ ಹಾಗೂ ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನಾಕಾರರಾಗಿ ಕೆಲಸ ಮಾಡಿದ್ದಾರೆ.

ಉಳಿದಂತೆ, ಹಿರಿಯ ನಟಿ ಸಂಗೀತಾ, ಸಿದ್ದು, ಮಾ. ಆಲಾಪ್ ಹಾಗೂ ಇನ್ನಿತರರ ಪ್ರಮುಖ ತಾರಾಬಗಳವಿರುವ ‘ಓ’ ಚಿತ್ರ ಕನ್ನಡ ಸಿನಿ‌ ಪ್ರೇಕ್ಷಕರ ಮನದಲ್ಲಿ 2022ರ ಸಾಲಿನ ಯಶಸ್ವೀ ಸಿನಿಮಾಗಳ ಪಟ್ಟಿ ಸೇರಿ, ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳಲಿದೆಯಾ ಕಾದು ನೋಡಬೇಕು!

RELATED ARTICLES

Most Popular

Share via
Copy link
Powered by Social Snap