ಪವರ್ ಸ್ಟಾರ್ ಅಪ್ಪು ಅವರನ್ನು ನೆನೆಯದ ಪ್ರೇಕ್ಷಕರಿಲ್ಲ. ಇಡೀ ಚಿತ್ರರಂಗಕ್ಕೆ ಅಪ್ಪು ಅವರನ್ನು ಕಳೆದುಕೊಂಡ ಅಗಲಿಕೆಯ ನೋವು ಇನ್ನು ಹಾಗೆಯೇ ಇದೆ.
ಅಪಪ್ಪು ಕಳೆದುಕೊಂಡದ್ದು ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ ಅವರನ್ನು ಪ್ರತಿನಿತ್ಯ ಒಂದಲ್ಲ, ಒಂದು ಕಾರಣಕ್ಕೆ ಸ್ಮರಿಸುತ್ತಿದ್ದೇವೆ. ಇತ್ತೀಚಿಗೆ “ಪೊನ್ನಿಯಿನ್ ಸೆಲ್ವನ್” ಚಿತ್ರದ ಪ್ರಚಾರದ ವೇಳೆ ಅಪ್ಪು ಅವರನ್ನು ನಟಿ ತ್ರಿಷಾ ನೆನೆದಿದ್ದರು. ಕೆಜಿಎಫ್ -2,ಆರ್ ಆರ್ ಆರ್, ಲೈಗರ್ ಚಿತ್ರದ ಪ್ರಚಾರದಲ್ಲೂ ಅಪ್ಪು ಅವರನ್ನು ಚಿತ್ರ ತಂಡ ಸ್ಮರಿಸಿತ್ತು.
ಒಳ್ಳೆಯ ಹುಡುಗ ಪ್ರಥಮ್ ಅವರು ಈ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನದ ವಿಡಿಯೋ ಕ್ಲಿಪ್ ಹಂಚಿಕೊಂಡು ಅಪ್ಪು ಅವರನ್ನು ಮತ್ತೆ ನೆನಪು ಮಾಡಿಕೊಂಡಿದ್ದಾರೆ.
ಪುನೀತ್ ಅವರ ಹೆಸರನ್ನು ಇನ್ನೂ ಸಹ ನನ್ನ ವಾಟ್ಸಪ್ ಬ್ರಾಡ್‌ಕಾಸ್ಟ್ ಲಿಸ್ಟ್‌ನಲ್ಲಿ ಇಟ್ಟುಕೊಂಡಿದ್ದೇನೆ, ಯಾಕಂದ್ರೆ ಯಾವಾಗಾದ್ರೂ ಆ ಸಿಂಗಲ್ ಟಿಕ್ ಡಬಲ್ ಟಿಕ್ ಆಗಬಹುದು ಎಂಬ ನಂಬಿಕೆಯಿದೆ ಎಂದು ಪ್ರಥಮ್ ಹೇಳಿದ್ದರು.
ಅಪ್ಪು ಅವರನ್ನು ಎರಡು ವಿಧಾನದಲ್ಲಿ ಹಿಡಿದುಹಾಕಬಹುದು ಎಂದಿದ್ದರು. ಒಂದು ಕಷ್ಟ ಹೇಳಿಕೊಂಡ್ರೆ ಸಿಂಪ್ಲಿಸಿಟಿ ಇದ್ದ ಅಪ್ಪುವನ್ನು ಗೆಲ್ಲಬಹುದಿತ್ತು, ಇನ್ನೊಂದು ಟ್ಯಾಲೆಂಟ್ ಮತ್ತು ಕೆಲಸದಿಂದ ಹಿಡಿದು ಹಾಕಬಹುದು ಎಂದು ಪ್ರಥಮ್ ಹೇಳಿಕೆ ನೀಡಿದ್ದರು.
ಎಲ್ಲರ ಕೈಗೂ ಸಿಗ್ತಾ ಇದ್ದ ಏಕೈಕ ಸೂಪರ್ ಸ್ಟಾರ್ ಅಂದ್ರೆ ಪುನೀತ್ ರಾಜ್‌ಕುಮಾರ್ ಎಂದು ಎಲ್ಲರಿಗೂ ಬೆಂಬಲ ನೀಡ್ತಿದ್ದ ಅಪ್ಪು ಅವರನ್ನು ನೆನೆದರು ಹಾಗೂ ಅಂತಹ ನಟ ಮತ್ತೆ ಹುಟ್ಟಲ್ಲ ಎಂದು ಕಣ್ಣಂಚಲ್ಲಿ ನೀರು ತುಂಬಿಕೊಂಡಿದ್ದರು.

