ಬಹುಭಾಷಾ ನಟಿ ನಿತ್ಯಾ ಮೆನನ್ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸದ್ದು ಮಾಡಿತು. ಆ ಬಳಿಕ ಆ ಸುದ್ದಿ ಸತ್ಯವೋ ಸುಳ್ಳೋ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಯಿತು.


ಇದೀಗ ‘ಮೈನಾ‘ ನಟಿ ಇವೆಲ್ಲದರ ಕುರಿತು ಮಾತಾನಾಡಿದ್ದು, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ವಿಡಿಯೋ ಮಾಡಿ ಮಾತಾನಾಡಿರುವ ಅವರು, ನಾನು ಮದುವೆ ಆಗುತ್ತಿಲ್ಲ. ಯಾರೋ ಸ್ಪಷ್ಟನೆ ಇಲ್ಲದವರು ಈ ಆರ್ಟಿಕಲ್ ಬರೆದಿರಬಹುದು. ಸದ್ಯಕ್ಕೆ ನನ್ನದು ಮದುವೆ ಬಗ್ಗೆ ಯಾವುದೇ ಯೋಜನೆಗಳಿಲ್ಲ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಅವರ ಬಗ್ಗೆ ಮಾತೊಂದು ಕೂಡ ಹರಿದಾಡುತ್ತಿದೆ. ಅದು ಅವರು ನಟನೆಯಿಂದ ದೂರ ಉಳಿಯುವ ವಿಚಾರ. ಈ ಬಗ್ಗೆಯೂ ವಿಡಿಯೋದಲ್ಲಿ ಮಾತಾನಾಡಿರುವ ಅವರು, ನಾನು ನಟನೆಯಿಂದ ಬ್ರೇಕ್ ತೆಗೆದುಕೊಳ್ಳಬೇಕೆಂದಿದ್ದೇನೆ. ಒಂದಷ್ಟು ಸಿನಿಮಾಗಳು ತೆರೆಗೆ ಬರಲಿವೆ. ಮತ್ತೆ ಕೆಲ ಸಿನಿಮಾಗಳನ್ನು ಮಾಡಿ ಬ್ರೇಕ್ ತೆಗೆದುಕೊಳ್ಳುತ್ತೇನೆ. ನಿರಂತರವಾಗಿ ರೋಬೋಟ್ ಹಾಗೆ ಕೆಲಸ ಮಾಡಲು ಆಗಲ್ಲ. ಬ್ರೇಕ್ ತಕ್ಕೊಂಡು ಒಂದಷ್ಟು ಸುತ್ತಾಡುತ್ತೇನೆ ಎಂದಿದ್ದಾರೆ.



