ಸ್ಯಾಂಡಲ್ ವುಡ್ ಗೆ ಅಣ್ಣಾವ್ರ ಕುಡಿಯ ಮತ್ತೊಂದು ಪ್ರತಿಭೆ ಸದ್ದಿಲ್ಲದೆ ಎಂಟ್ರಿಯಾಗಿದೆ. ರಾಮ್‌ಕುಮಾರ್ ಪುತ್ರಿ ಧನ್ಯಾ ರಾಮ್‌ಕುಮಾರ್ ಹಾಗೂ ಧೀರೇನ್ ರಾಮ್ ಕುಮಾರ್ ಬಳಿಕ ಮತ್ತೊಬ್ಬ ಅಣ್ಣಾವ್ರ ಮೊಮ್ಮಗ ಎಂಟ್ರಿ ಕೊಡುತ್ತಿದ್ದಾರೆ.
ಡಾ.ರಾಜ್‌ಕುಮಾರ್ ಅವರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಪುತ್ರ ಷಣ್ಮುಖ ಗೋವಿಂದರಾಜು ಮೊದಲ ಸಿನಿಮಾ ಸೆಟ್ಟೇರಿದೆ.
ಷಣ್ಮುಖ ಗೋವಿಂದರಾಜು ಅವರ ಸಿನಿಮಾದ ಟೈಟಲ್ ಸಂಕ್ರಾಂತಿ ಹಬ್ಬದಂದು ರಿಲೀಸ್ ಆಗಿದೆ. ಈ ಸಿನಿಮಾದಕ್ಕೆ ‘ನಿಂಬಿಯಾ ಬನಾದ ಮ್ಯಾಗ’ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರಕ್ಕೆ ಅಶೋಕ್ ಕಡಬ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಪಂಕಜ್ ನಾರಾಯಣ್, ಭವ್ಯಾ, ಎಂ.ಎಸ್.ಉಮೇಶ್, ರಾಮಕೃಷ್ಣ, ಶಶಿಧರ್ ಕೋಟೆ ಮುಂತಾದವರು ತಾರಾಗಣದಲ್ಲಿದ್ದಾರೆ.
ಈಗಾಗಲೇ ಡಿ.15 ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು, ಶೃಂಗೇರಿ, ಆಗುಂಬೆ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

