HomeMoviesಚಾಲನೆ ಕಂಡಿತು ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ! ಲೈಕಾ ಪ್ರೊಡಕ್ಷನ್ಸ್ ನ ಮೊದಲ ಕನ್ನಡ ಸಿನಿಮಾದ...

ಚಾಲನೆ ಕಂಡಿತು ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ! ಲೈಕಾ ಪ್ರೊಡಕ್ಷನ್ಸ್ ನ ಮೊದಲ ಕನ್ನಡ ಸಿನಿಮಾದ ಮುಹೂರ್ತಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳಾದ ದೇವೇಗೌಡ ಹಾಗು ಕುಮಾರಸ್ವಾಮಿ!

ನಿಖಿಲ್ ಸಿನಿಮಾ ಮುಹೂರ್ತಕ್ಕೆ ಬಂದ್ರು ಎಚ್ ಡಿ ಕುಮಾರಸ್ವಾಮಿ ಹಾಗೂ ದೇವೇಗೌಡರು

ಕನ್ನಡ ಸಿನಿಮಾ ಮುಹೂರ್ತಕಾಗಿ ಬೆಂಗಳೂರಿಗೆ ಬಂದಿಳಿದ ಲೈಕಾ ಫ್ಯಾಮಿಲಿ

ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ಹೊಸ ಸಿನಿಮಾದ ಮುಹೂರ್ತ ಇಂದು ಸೆಟ್ಟೇರಿದೆ .. ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಿಖಿಲ್ ಹೊಸ ಸಿನಿಮಾ ಗೆ ಅಧಿಕೃತ ಚಾಲನೆ ಸಿಕ್ಕಿದ್ದು ಮುಹೂರ್ತ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿಗಳಾದ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಇಬ್ಬರು ಭಾಗಿಯಾಗಿದ್ದರು ಇನ್ನು ಲೈಕಾ ಸಂಸ್ಥೆಯ ಮೊದಲ ಕನ್ನಡ ಸಿನಿಮಾದ ಮುಹೂರ್ತಕ್ಕೆ ಇಡಿ ಲೈಕಾ ಫ್ಯಾಮಿಲಿ ಲಂಡನ್ ನಿಂದ ಬೆಂಗಳೂರಿಗೆ ಆಗಮಿಸಿತ್ತು…

ನಿಖಿಲ್ ಸಿನಿಮಾ ನಿರ್ಮಾಣ ಮಾಡಲು ಲೈಕಾ ಸಂಸ್ಥೆಯ ಚೇರ್ಮೆನ್ ಸುಭಾಷ್ಕರನ್ ಅವರು ಮೂರು ವರ್ಷಗಳ ಕಾಲ ಕಾದಿದ್ದು ಇಂದು ಸಿನಿಮಾ ಗೆ ಅಧಿಕೃತ ಚಾಲನೆ ಕೊಟ್ಟಿರುವುದು ಖುಷಿ ವಿಚಾರ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ… ಇನ್ನು ಮುಹೂರ್ತದಲ್ಲಿ ಮಾತನಾಡಿದ ನಿಖಿಲ್ ಇನ್ನು ಮುಂದೆ ವರ್ಷಕ್ಕೆ ಮೂರು ಸಿನಿಮಾಗಳನ್ನು ಮಾಡುವಂತಹ ನಿರ್ಧಾರ ಮಾಡಿದ್ದೇನೆ ಹಾಗಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಿ ಪ್ರೇಕ್ಷಕರನ್ನ ರಂಜಿಸುತ್ತೇನೆ ಎಂದಿದ್ದಾರೆ …

ಇನ್ಮು ನಟ ಕೋಮಲ್ ಸಿನಿಮಾದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ನಿರ್ದೇಶಕ ಲಕ್ಷಣ್ ನಿಖಿಲ್ ಕುಮಾರ್ ಅವ್ರಿಗೆ ಆಕ್ಷನ್ ಕಟ್ ಹೇಳಲು ಸಖತ್ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ..ನಟಿ ಯುಕ್ತಿ ತರೇಜಾ ಕನ್ನಡದ ಸಿನಿಮಾದಲ್ಲಿ ಮೊದಲ ಬಾರಿಗೆ ಅಭಿನಯ ಮಾಡುತ್ತಿದ್ದಾರೆ…ಕನ್ನಡಿಗರಾದ ಅಜನೀಶ್ ಲೋಕನಾಥ್, ರಘು ನಿಡುವಳ್ಳಿ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ..ಮುಂದಿನ ತಿಂಗಳು ಚಿತ್ರೀರಣ ಶುರುವಾಗಲಿದ್ದು ಐದು ತಿಂಗಳಲ್ಲಿ ಚಿತ್ರೀಕರಣ ಮುಗಿಸಿ ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ನಲ್ಲಿದ್ದಾರೆ ನಿರ್ದೇಶಕ ಲಕ್ಷಣ್ ..ಸಿನಿಮಾ ಖಮಡಿತವಾಗಿಯೂ ಅದ್ದೂರಿಯಾಗಿ ‌ಮೂಡಿಬರುವ ಎಲ್ಲಾ ಸೂಚನೆಗಳು ಸಿಕ್ತಿದೆ….

RELATED ARTICLES

Most Popular

Share via
Copy link
Powered by Social Snap