ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಸಿನಿಮಾ ಜೋಡಿ ಹಣೆಮಣೆ ಏರಲು ಸಜ್ಜಾಗಿದೆ.
‘ಟ್ರಂಕ್’ ಹಾಗೂ ‘ವಿಜಯಾನಂದ’ ಸಿನಿಮಾವನ್ನು ನಿರ್ದೇಶನ ಮಾಡಿದ್ದ ರಿಷಿಕಾ ಶರ್ಮಾ ಹಾಗೂ ಅದೇ ಸಿನಿಮಾದಲ್ಲಿ ನಟಿಸಿದ್ದ ನಿಹಾಲ್ ರಜಪೂತ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದ ವಿಚಾರ ಬಹಿರಂಗವಾಗಿ, ಇಬ್ಬರು ಮದುವೆ ಬಂಧಕ್ಕೆ ಒಳಗಾಗುವ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಇದೇ ತಿಂಗಳ 15ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಟಿಟಿಡಿ ಕಲ್ಯಾಣ ಮಂಟಪದಲ್ಲಿ ವಿವಾಹವಾಗಲಿದ್ದಾರೆ.
15ರಂದು ಬೆಂಗಳೂರಿನಲ್ಲಿ ಮದುವೆ ಕಾರ್ಯ ನೆರವೇರಿದರೆ, ಫೆಬ್ರವರಿ 17ಕ್ಕೆ ಧಾರವಾಡದ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಕಳೆದ 9 ವರ್ಷಗಳಿಂದ ನಿಹಾಲ್ – ರಿಷಿಕಾ ಪ್ರೀತಿಸುತ್ತಿದ್ದರು



