ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಇಂದು ಬಣ್ಣದ ಲೋಕದಲ್ಲಿ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು. ಅವರ ಅಭಿಮಾನಿಗಳ ವರ್ಗವೂ ದೊಡ್ಡದಿದೆ. ಹತ್ತಾರು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ನಯನತಾರ ಹಳೆಯ ಕಹಿ ದಿನಗಳನ್ನು ಸ್ಮರಿಸಿದ್ದಾರೆ.
ಬಣ್ಣದ ಲೋಕದಲ್ಲಿ ಅವಕಾಶಗಳನ್ನು ಹುಡುಕಿಕೊಂಡು ಹೋಗುವ ಎಷ್ಟೋ ಕಲಾವಿದರಿಗೆ ಕಾಸ್ಟಿಂಗ್ ಕೌಚ್ ಎಂಬ ʼಭೂತʼವನ್ನು ಎದುರಿಸಬೇಕಾಗುವ ಸನ್ನಿವೇಶಗಳು ಬರುತ್ತದೆ. ಇದರಿಂದ ನೈಜ ಪ್ರತಿಭೆಗಳಿಗೆ ಅವಕಾಶವೇ ಸಿಕ್ಕಾದಂತಾಗುತ್ತದೆ.
ಈ ಕಾಸ್ಟಿಂಗ್ ಕೌಚ್ ಹೀರೋಯಿನ್ ಗಳಾಗಿ ಬರುವ ಅನೇಕರಿಗೆ ದೊಡ್ಡ ಸಮಸ್ಯೆಯಾಗಿಯೇ ಕಾಡಿದೆ. ಈ ಕಹಿ ಅನುಭವ ನಯನತಾರ ಅವರಿಗೆ ಆಗಿದೆ ಎಂದು ಸಂದರ್ಶನವೊಂದರಲ್ಲಿ ನಟಿ ಹೇಳಿದ್ದಾರೆ.
‘ತಮಗೆ ಅನುಕೂಲಕರ’ವಾಗಿದ್ದರೆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನೀಡುತ್ತೇವೆ ಎಂಬ ಆಫರ್ ಒಂದೊಮ್ಮೆ ನನಗೆ ಬಂದಿತ್ತು ಎಂದು ನಯಕತಾರಾ ಬಹಿರಂಗಪಡಿಸಿದರು. ಆದರೆ ‘ಇಲ್ಲ’ ಎಂದು ಹೇಳಿ ಆಫರ್ ತಿರಸ್ಕರಿಸುವಷ್ಟು ಧೈರ್ಯವಿತ್ತು, ನಾನು ನನ್ನ ನಟನಾ ಸಾಮರ್ಥ್ಯವನ್ನು ನಂಬುವವಳು ಎಂದು ನಯನತಾರಾ ಹೇಳಿದ್ದಾರೆ.
ಮದುವೆಯ ಬಳಿಕ ನಯನತಾರ ‘ಗಾಡ್ ಫಾದರ್’ ಹಾಗೂ ‘ಕನೆಕ್ಟ್’ ನಟಿಸಿದ್ದರು ಆದರೆ ಅವರೆಡೂ ಅಷ್ಟು ಯಶಸ್ಸು ಸಾಧಿಸಿಲ್ಲ. ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅವರ ʼಜವಾನ್ʼ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

