HomeNews'ಕ್ರೇಜಿ ಸ್ಟಾರ್'ನ ಭೇಟಿಯಾದರು 'ನ್ಯಾಚುರಲ್ ಸ್ಟಾರ್' ನಾನಿ!

‘ಕ್ರೇಜಿ ಸ್ಟಾರ್’ನ ಭೇಟಿಯಾದರು ‘ನ್ಯಾಚುರಲ್ ಸ್ಟಾರ್’ ನಾನಿ!

ತಮ್ಮ ಸಹಜ ಹಾಗು ಪ್ರಭುದ್ದ ನಟನೆಯಿಂದ ‘ನ್ಯಾಚುರಲ್ ಸ್ಟಾರ್’ ಎಂದೇ ಖ್ಯಾತಿ ಪಡೆದಿರುವ ತೆಲುಗಿನ ಖ್ಯಾತ ನಟ ನಾನಿ ಅವರು. ಸದ್ಯ ಇವರ ಮುಂದಿನ ಬಹುನಿರೀಕ್ಷಿತ ಪಾನ್ ಇಂಡಿಯನ್ ಸಿನಿಮಾ ‘ದಸರಾ’ ಬಿಡುಗಡೆಗೆ ಸನ್ನಿಹಿತವಾಗುತ್ತಿದೆ. ಇದೆ ಮಾರ್ಚ್ 30ಕ್ಕೆ ‘ನಾನೀಸ್ ದಸರಾ’ ಸಿನಿಮಾ ತೆಲುಗು ಭಾಷೆಯ ಜೊತೆಯಲ್ಲೇ ಕನ್ನಡ, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲೂ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದೆ. ಚಿತ್ರತಂಡ ಸಿನಿಮಾಡ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದು, ನಾಯಕ ನಟ ನಾನಿ ಕರುನಾಡಿಗೆ ಕಾಲಿಟ್ಟಿದ್ದಾರೆ.

ಶ್ರೀಕಾಂತ್ ಓದೇಲಾ ಅವರ ನಿರ್ದೇಶನದ ‘ದಸರಾ’ ಸಿನಿಮಾದಲ್ಲಿ ನಾಯಕ ನಾನಿ ಅವರಿಗೆ ನಾಯಕಿಯಾಗಿ ಕೀರ್ತಿ ಸುರೇಶ್ ಅವರು ನಟಿಸಿದ್ದಾರೆ. ಇನ್ನು ಕಥೆಯ ಪ್ರಮುಖ ಪಾತ್ರಧಾರಿಯಾಗಿ ನಮ್ಮ ಕನ್ನಡದ ‘ದಿಯಾ’ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಅವರು ಕೂಡ ಬಣ್ಣ ಹಚ್ಚಿದ್ದಾರೆ. ಕರ್ನಾಟಕದಲ್ಲಿ ಸಿನಿಮಾದ ವಿತರಣೆಯನ್ನು ‘ಕೆ ಆರ್ ಜಿ ಸ್ಟುಡಿಯೋಸ್’ ನಡೆಸುತ್ತಿದೆ.

ಸದ್ಯ ‘ದಸರಾ’ ಚಿತ್ರದ ಪ್ರಚಾರದ ನಿಮಿತ್ತ ಬೆಂಗಳೂರಿಗೆ ಬಂದಿಳಿದ ನಾನಿ ಅವರು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಪ್ರಚಾರ ಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು ರವಿಚಂದ್ರನ್ ಅವರನ್ನು ಕೂಡಿಕೊಂಡಿರುವ ನಾನಿ ಅವರು, ರವಿಮಾಮನ ಪುತ್ರರಾದ ಮನೋರಂಜನ್ ಹಾಗು ತ್ರಿವಿಕ್ರಮ್ ಅವರ ಜೊತೆಗೂ ಮಾತುಕತೆ ನಡೆಸಿದ್ದಾರೆ. ಈ ವೇಳೆ ದೀಕ್ಷಿತ್ ಶೆಟ್ಟಿಯವರು ಕೂಡ ನಾನಿ ಅವರೊಡನೆ ಹಾಜರಿದ್ದರು.

ಸುಧಾಕರ್ ಚೇರುಕುರಿ ಅವರ ‘ಶ್ರೀ ಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಶ್ರೀಕಾಂತ್ ಓದೇಲಾ ಅವರ ನಿರ್ದೇಶನದ ‘ನಾನೀಸ್ ದಸರಾ’ ಸಿನಿಮಾ ಒಂದು ಪಕ್ಕ ಕಮರ್ಷಿಯಲ್ ಆಕ್ಷನ್ ಸಿನಿಮಾ ಆಗಿರಲಿದೆ. ಟ್ರೈಲರ್ ನ ದೃಶ್ಯಗಳು ಪ್ರೇಕ್ಷಕರ ಮನಗೆದ್ದಿದ್ದು, ಸಿನಿಮಾದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. ಇದೆ ಮಾರ್ಚ್ 30ಕ್ಕೆ ಸಿನಿಮಾ ಬಿಡುಗಡೆ ಕಾಣುತ್ತಿದೆ. ಈ ನಡುವೆ ಆಗಿರುವ ನ್ಯಾಚುರಲ್ ಸ್ಟಾರ್ ಹಾಗು ಕ್ರೇಜಿ ಸ್ಟಾರ್ ನ ಸಮಾಗಮ ಕನ್ನಡಿಗರಲ್ಲಿ ಸಂತಸ ತಂದಿದೆ.

RELATED ARTICLES

Most Popular

Share via
Copy link
Powered by Social Snap