2014ರಲ್ಲಿ ಬಿಡುಗಡೆಯಾಗಿ ಜನಮನ್ನಣೆ ಪಡೆದಂತಹ ಸಿನಿಮಾ ‘ನಮೋ ಭೂತಾತ್ಮ’. ಸೆನ್ಸೇಷನಲ್ ಸ್ಟಾರ್ ಕೋಮಲ್, ನಟ ಹರೀಶ್ ರಾಜ್, ಐಶ್ವರ್ಯ ಮೆನನ್ ಸೇರಿದಂತೆ ಹಲವು ಹೆಸರಾಂತ ನಟರು ಬಣ್ಣ ಹಚ್ಚಿದ್ದ ಈ ಹಾರರ್ ಕಾಮಿಡಿ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಕೋಮಲ್ ಹಾಗು ಹರೀಶ್ ರಾಜ್ ಅವರ ಹಾಸ್ಯ, ಮೈ ನವೀರೇಳಿಸುವ ಭಯಾನಕ ದೃಶ್ಯಗಳು ಇವೆಲ್ಲದಕ್ಕೆ ಸಿನಿಪ್ರೇಮಿಗಳು ಮನಸೋತಿದ್ದರು. ಇದೀಗ ಸಿನಿಮಾದ ಸೀಕ್ವೆಲ್ ಹೊರಬರಲು ಸಿದ್ಧವಾಗಿದೆ. ಅದೇ ತಂಡದಿಂದ ತಯಾರಾದ ‘ನಮೋ ಭೂತಾತ್ಮ 2’ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಗಿದೆ.


ಕೋಮಲ್, ಗೋವಿಂದೆ ಗೌಡ, ಲೇಖ ಚಂದ್ರ, ಮೋನಿಕಾ, ವರುಣ್ ಹಾಗು ಮಹಾಂತೇಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ನಮೋ ಭೂತಾತ್ಮ 2’ ಸಿನಿಮಾದ ಟೀಸರ್ ಅನ್ನು ಕನ್ನಡಿಗರ ನೆಚ್ಚಿನ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು ಬಿಡುಗಡೆ ಮಾಡಿದ್ದಾರೆ. ಎಲ್ಲೆಡೆ ಈ ಟೀಸರ್ ಬಾರೀ ಸದ್ದು ಮಾಡುತ್ತಿದೆ. ನಮೋ ಭೂತಾತ್ಮ ಸಿನಿಮಾ ನಿರ್ದೇಶನ ಮಾಡಿದಂತಹ ವಿ ಮುರಳಿ ಅವರೇ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಒಟ್ಟಿನಲ್ಲಿ ಒಂದೊಳ್ಳೆ ಹಾಸ್ಯಮಯ ಹಾರರ್ ಸಿನಿಮಾಗೆ ಕನ್ನಡಿಗರು ಎದುರು ನೋಡುತ್ತಿದ್ದಾರೆ.
ಎಂ ಎಸ್ ಗೋಲ್ಡನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ಶೇಖರ್ ಅವರು ‘ನಮೋ ಭೂತಾತ್ಮ 2’:ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಅರುಣ್ ಆಂಡ್ರೆ ಅವರ ಸಂಗೀತ ಚಿತ್ರಕ್ಕಿದೆ. ಸಿನಿಮಾ ಯಾವಾಗ ಬಿಡುಗಡೆಯಗುತ್ತದೆ ಎಂದು ಕಾದು ನೋಡಬೇಕಿದೆ.

